Kannada NewsKarnataka NewsLatest

ನದಿಯಲ್ಲಿ ಬಾಲಕರಿಬ್ಬರ ದುರಂತ ಸಾವು

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಸ್ನೇಹಿತರೊಂದಿಗೆ ಮಲಪ್ರಭಾ ನದಿಗೆ ಈಜಲೆಂದು ತೆರಳಿದ್ದ ಬಾಲಕರಿಬ್ಬರು ನೀರಿನ ಸುಳಿವಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ಪಟ್ಟಣದಲ್ಲಿ ವರದಿಯಾಗಿದೆ.
ಮೃತರನ್ನು ಸ್ಥಳೀಯ ದುರ್ಗಾನಗರ ಬಡಾವಣೆಯ ರೋಹಿತ ಅರುಣ ಪಾಟೀಲ (೧೫) ಮತ್ತು ಶ್ರೇಯಸ್ ಮಹೇಶ ಬಾಪಶೇಟ (೧೩)ಎಂದು ಗುರುತಿಸಲಾಗಿದೆ.
ಇವರಿಬ್ಬರೂ ಸೋಮವಾರ ಮಧ್ಯಾಹ್ನ ತಮ್ಮ‌ ಕೆಲ ಸ್ನೇಹಿತರೊಂದಿಗೆ ನದಿಗೆ ಈಜಲು ತೆರಳಿದ್ದರು. ನೀರಿನ ಸೆಳವಿಗೆ ಸಿಕ್ಕ ಶ್ರೇಯಸ್ ನೀರಿನಲ್ಲಿ ಮುಳುಗುತ್ತಿದ್ದುದನ್ನು ಗಮನಿಸಿದ ರೋಹಿತ ಆತನನ್ನು ರಕ್ಷಿಸಲು ಹೋಗಿ ತಾನೂ ನೀರಲ್ಲಿ ಮುಳುಗಿದ ಎಂದು ಸ್ಥಳೀಯರು ತಿಳಿಸಿದರು.
ಮೃತ ಬಾಲಕರ ಶವಗಳು ಬುಧವಾರ ನದಿಯಲ್ಲಿ ಪತ್ತೆಯಾಗಿವೆ. ಈ ಕುರಿತು ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಖಾನಾಪುರ ಪೊಲೀಸರು ತಿಳಿಸಿದ್ದಾರೆ.

Related Articles

Back to top button