
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕರ್ನಾಟಕ ರಾಜ್ಯ ಸರ್ಕಾರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರ ನೇರ ನೇಮಕಾತಿ ಹಿನ್ನಲೆಯಲ್ಲಿ ಮೀಸಲಾತಿಯನ್ನು ಅನುಸರಿಸಿ ನೈಜ ಕಾರ್ಮಿಕರನ್ನು ಖಾಯಂಯಾತಿಯಿಂದ ವಂಚಿಸಿದೆ ಎಂದು ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಹರಿಶ್ ನಾಯಕ ಆರೋಪಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ/ಹೊರಗುತ್ತಿಗೆ ಹಾಗೂ ನೇರ ಸಂಭಾವಣೆಯ ಕಾರ್ಮಿಕರ ಬದುಕು ಅತಂತ್ರಸ್ಥಿತಿಯಲ್ಲಿದೆ. ಪೌರಕಾರ್ಮಿಕರು ಮತ್ತು ಲೋಡರ್, ಕ್ಲೀನರ್ ಕೆಲಸದಲ್ಲಿ 15-20 ವರ್ಷಗಳಿಂದ ದಲಿತ ಸಮುದಾಯದ ಕಾರ್ಮಿಕರು ಮಾತ್ರ ಮೀಸಲಾಗಿದ್ದು, ಆದರೆ ನೇರ ನೇಮಕಾತಿಯಲ್ಲಿ ಸ್ವಚ್ಛತಾ ಕೆಲಸ ಮಾಡದ ಸಮುದಾಯ ಖಾಯಂಯಾಗಿ ನೈಜ ಪೌರಕಾರ್ಮಿಕರು ನೇರ ನೇಮಕಾತಿಯಲ್ಲಿ ಕಡಿಮೆ ಸಂಖ್ಯೆಯಲ್ಲಿ ನೇಮಕಾತಿಯಾಗಿದ್ದು, ಈಗ ಲೋಡರ್ ಮತ್ತು ಕ್ಲೀನರ್ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ನೇರ ನೇಮಕಾತಿ ಬದಲು ಖಾಯಂ ಯಾತಿಗೆ ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು.
ಇನ್ನು ಕಸವನ್ನು ಸಾಗಿಸುವ ಚಾಲಕರು ಕಸದ ಜೊತೆಗೆ ಇರುವುದರಿಂದ ಅವರಿಗೂ ಲೋಡರ್ ಮತ್ತು ಕ್ಲೀನರಗಳ ನೇಮಕಾತಿಯಂತೆ ಮಾಡಬೇಕು. ಈ ಹಿಂದೆ ಪೌರಕಾರ್ಮಿಕರ ನೇಮಕಾತಿಗೆ ಮುಂದಾದ ಸಂದರ್ಭದಲ್ಲಿ ವರ್ಗಕ್ಕೆ ನೀಡಿದ ಮೀಸಲಾತಿಯಲ್ಲಿ ಅಭ್ಯರ್ಥಿಗಳೂ ದೊರಕದೆ ಇದ್ದು, ಸದರಿ ಸ್ಥಾನಗಳು ಖಾಲಿ ಇರುತ್ತವೆ. ಅಂತಹ ಸ್ಥಳದಲ್ಲಿ ಹಾಲಿ ದುಡಿಯುತ್ತಿರುವ ಪೌರ ಕಾರ್ಮಿಕರನ್ನೆ ಪರಿಗಣಿಸುವಂತೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಉಕ ಜಿಲ್ಲಾಧ್ಯಕ್ಷ ಡಿ. ಶಾಮಸನ್, ಜಿಲ್ಲಾಧ್ಯಕ್ಷ ಬಸವರಾಜ ಕಾಂಬಳೆ ಮತ್ತು ಮಹಾನಗರ ಅಧ್ಯಕ್ಷ ವಿಠಲ ತಳವಾರ ಉಪಸ್ಥಿತರಿದ್ದರು.
6 ಐಪಿಎಸ್ ಅಧಿಕಾರಿಗಳ ವರ್ಗಾವಣೆ




