Belagavi NewsBelgaum NewsElection NewsKannada NewsKarnataka NewsPolitics

ಇದು ದೇಶದ ಭವಿಷ್ಯದ ಚುನಾವಣೆ -ಶಶಿಕಲಾ ಜೊಲ್ಲೆ

ದೇಶದ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಿ- ಶಶಿಕಲಾ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ : ಮೇ. ೭ ರಂದು ನಡೆಯುವ ಲೋಕಸಭೆ ಚುನಾವಣೆ ಭವಿಷ್ಯದ ಚುನಾವಣೆಯಾಗಿದ್ದು, ಕೇಂದ್ರದಲ್ಲಿ ಬಿಜೆಪಿ ಸರಕಾರ ರಚನೆಗೆ ಪ್ರತಿಯೊಬ್ಬರು ಬಿಜೆಪಿ ಬೆಂಬಲಿಸಬೇಕೆಂದು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ಅವರು ತಾಲೂಕಿನ ಕರೋಶಿ ಗ್ರಾಮದಲ್ಲಿ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅವರ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಕಳೆದ ೧೦ ವರ್ಷದಲ್ಲಿ ಮಾಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪ್ರತಿ ಮನೆ ಮನೆಗೆ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕೆಂದರು.
ದೇಶದ ರಾಷ್ಟ್ರೀಯ ಹೆದ್ದಾರಿಗಳು, ರೈಲು, ಮೆಟ್ರೋ, ರೈತರಿಗೆ ಕಿಸಾನ ಸಮ್ಮಾನ, ಆಯುಷ್ಮಾನ, ಉಚಿತ ಗ್ಯಾಸ್ ಹೀಗೆ ಅನೇಕ ಯೋಜನೆಗಳು ಜಾರಿಯಾಗಿವೆ. ದೇಶದ ಸುರಕ್ಷತೆಗಾಗಿ ಬಿಜೆಪಿ ಸರಕಾರ ಮೊದಲ ಆಧ್ಯತೆ ನೀಡಿದೆ. ಮುಂದಿನ ಐದು ವರ್ಷದಲ್ಲಿ ದೇಶದ ಮತ್ತಷ್ಟು ಅಭಿವೃದ್ಧಿ ಮಾಡಲು ಬಿಜೆಪಿ ಸರಕಾರ ಬರಲು ಎಲ್ಲರೂ ಬಿಜೆಪಿ ಬೆಂಬಲಿಸಬೇಕೆಂದರು.
ಯುವ ಮುಖಂಡ ಅರುಣ ಐಹೊಳೆ ಮಾತನಾಡಿ, ನಮ್ಮ ತಂದೆಯವರನ್ನು ನಾಲ್ಕು ಬಾರಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆ ಮಾಡಿದ ಕರೋಶಿ ಗ್ರಾಮದ ಋಣ ಹೆಚ್ಚು ಇದೆ. ಎಲ್ಲರೂ ಬಿಜೆಪಿ ಬೆಂಬಲಿಸಿ ಜೊಲ್ಲೆ ಅವರನ್ನು ಆಯ್ಕೆ ಮಾಡಬೇಕೆಂದರು.
ವಿಜಯ ಕೋಟಿವಾಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಯಬಾಗ ಮಂಡಳ ಅಧ್ಯಕ್ಷ ಪ್ರತ್ವಿರಾಜ ಜಾಧವ, ಎಲ್.ಬಿ.ಚೌಗಲಾ, ಅಭಯ ಮಾನವಿ, ಅಶೋಕ ಹರಗಾಪೂರೆ, ಶಿವಾನಂದ ನೊಗಿನಾಳ, ಪಂಚಾಕ್ಷರಿ ಹಳಿಜೋಳೆ, ವಾಸುದೇವ ಕುಲಕರ್ಣಿ, ಪ್ರಭು ಡಬ್ಬನ್ನವರ, ಗುರು ನಿರ್ವಾಣಿ, ಈರಗೌಡ ಪಾಟೀಲ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ರಾಜು ಹರಗಣ್ಣವರ ಸ್ವಾಗತಿಸಿದರು.




Home add -Advt

Related Articles

Back to top button