Latest

ನಮ್ಮದು ಲವ್ & ಹೇಟ್ ರಿಲೇಷನ್ ಶಿಪ್ ಎಂದ ಸಿದ್ದರಾಮಯ್ಯ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮತಾಂತರ ನಿಷೇಧ ವಿಧೇಯಕದ ಬಗ್ಗೆ ವಿಧಾನಸಭೆಯಲ್ಲಿ ಭಾರಿ ಚರ್ಚೆ ನಡೆಯುತ್ತಿದ್ದು, ಆಡಳಿತ ಪಕ್ಷ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಗಂಭೀರ ಚರ್ಚೆ ನಡುವೆಯೇ ಹಾಸ್ಯಚಟಾಕಿಗಳು ನಡೆಯುತ್ತಿವೆ.

ಮತಾಂತರ ನಿಷೇಧ ಕಾಯ್ದೆ ಬಗ್ಗೆ ಚರ್ಚೆಯ ನಡುವೆಯೇ ವಿಧಾನಸಭೆಯಲ್ಲಿ ಸಚಿವ ಈಶ್ವರಪ್ಪ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ನೇಹದ ಬಗ್ಗೆ ಕುತೂಹಲಕಾರಿ ಚರ್ಚೆ ನಡೆದ ಪ್ರಸಂಗ ನಡೆದಿದೆ. ಈಶ್ವರಪ್ಪ ಹಾಗೂ ಸಿದ್ದರಾಮಯ್ಯ ನಡುವಿನ ಸ್ನೇಹದ ಗುಟ್ಟೇನು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ನಮ್ಮದು ಲವ್ & ಹೇಟ್ ರಿಲೇಷನ್ ಷಿಪ್ ಎಂದಿದ್ದಾರೆ.

ಮಾತಿನ ಮಧ್ಯಪ್ರವೇಶ ಮಾಡಿದ ಸಚಿವ ಆರ್.ಅಶೋಕ್ ಯಾವ ಕಾರಣಕ್ಕೆ ಲವ್, ಯಾವ ಕಾರಣಕ್ಕೆ ಹೇಟ್ ಎಂಬುದನ್ನು ವಿವರಿಸಿ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅದನ್ನು ನಾನು, ನೀವು, ಹಾಗೂ ಈಶ್ವರಪ್ಪ ಕಾಫಿ ಕುಡಿಯುವಾಗ ವಿವರಿಸುತ್ತೇನೆ. ಈಗ ಆ ಬಗ್ಗೆ ಮಾತನಾಡುವಷ್ಟು ನನಗೆ ಸಮಯವಿಲ್ಲ ಎಂದರು. ಇದಕ್ಕೆ ಸ್ಪೀಕರ್ ಕೂಡ ನಿಮ್ಮ ಜೊತೆ ನನಗೂ ಕಾಫಿಗೆ ಕರೆಯಿರಿ ಎಂದು ನಕ್ಕರು. ಕಲಾಪದ ನಡುವೆಯೇ ಸದಸ್ಯರು ನಗೆಗಡಲಲ್ಲಿ ತೇಲಿದ ಪ್ರಸಂಗ ನಡೆಯಿತು.
ಮತಾಂತರ ಮಹಾಸಮರ; ಸದನದಲ್ಲಿ ಕೋಲಾಹಲ

Home add -Advt

Related Articles

Back to top button