LatestNational

*ಮಾಜಿ ಸಿಎಂ ಕಾರಿನ ಚಕ್ರದಡಿ ಸಿಲುಕಿ ವೃದ್ಧ ಸಾವು*

ಪ್ರಗತಿವಾಹಿನಿ ಸುದ್ದಿ: ಆಂಧ್ರ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ರ್ಯಾಲಿ ವೇಳೆ ಘೋರ ದುರಂತವೊಂದು ಸಂಭವಿಸಿದೆ. ರ್ಯಾಲಿ ವೇಳೆ ನೂಕಾಟ-ತಳ್ಳಾಟ ನಡೆದು ಜಗನ್ ಕಾರಿನ ಚಕ್ರದಡಿ ಸಿಲುಕಿ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ.

ಆಮ್ಧ್ರದ ಪಲ್ನಾಡು ಜಿಲ್ಲೆಯ ಸತ್ತೇನಹಳ್ಳಿಯಲ್ಲಿ ಜೂನ್ 18ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 70 ವರ್ಷದ ಸಂಗಯ್ಯ ಮೃತ ದುರ್ದೈವಿ. ಅಂದು ನಡೆದ ರ್ಯಾಲಿಯಲ್ಲಿ ಕಾರ್ಯಕರ್ತರಿಂದ ಭಾರಿ ನೂಕಾಟ-ತಳ್ಳಾಟ ನಡೆದಿತ್ತು. ಈ ವೇಳೆ ವೃದ್ಧ ಸಂಗಯ್ಯ ಕೆಳಗೆ ಬಿದ್ದಿದ್ದಾರೆ. ರ್ಯಾಲಿಯಲ್ಲಿ ಬರುತ್ತಿದ್ದ ಜಗನ್ ಕಾರಿನ ಚಕ್ರದಡಿ ಸಿಲುಕಿ ಅವರು ಸಾವನ್ನಪ್ಪಿದ್ದಾರೆ.

Home add -Advt

ರ್ಯಾಲಿಯ ಜನಸಾಗರ, ಜಯಘೋಷಗಳ ನಡುವೆ ಕೆಳಗೆ ಬಿದ್ದು ಕಾರಿನ ಚಕ್ರದಡಿ ವ್ಯಕ್ತಿ ಸಿಲುಕಿ ಸಾವನ್ನಪ್ಪಿದ್ದೂ ಯಾರುಗೂ ಗೊತ್ತೇ ಇರಲಿಲ್ಲ. ಆದರೆ ರ್ಯಾಲಿಯ ವಿಡಿಯೋ ಈಗ ವೈರಲ್ ಆಗುತ್ತಿದ್ದಂತೆ ಕಾರಿನ ಚಕ್ರದಡಿ ಸಿಲುಕಿ ವ್ಯಕ್ತಿ ಮೃತಪಟ್ಟಿರುವುದು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಕಾರು ಚಾಲಕ ರಮಣ್, ಮಾಜಿ ಸಿಎಂ ಜಗನ್ ವಿರುದ್ಧ ಪ್ರಕರಣ ದಾಖಲಾಗಿದೆ. ಕಾರು ಚಾಲಕನನ್ನು ಬಂಧಿಸಲಾಗಿದೆ.

Related Articles

Back to top button