Latest

ರಂಗೋಲಿ ಮತ್ತು ಮಹಿಳಾ ಹೋರಾಟಗಾರರ ಬಗ್ಗೆ ಭಾಷಣ ಸ್ಪರ್ಧೆ

ಪ್ರಗತಿವಾಹಿನಿ ಸುದ್ದಿ, ಬೈಲಹೊಂಗಲ:

ಗೋವನಕೊಪ್ಪ ಗ್ರಾಮದ ಸಣ್ಣವೀರಪ್ಪ ಚನ್ನಬಸಪ್ಪ ಹೊಂಗಲ (SCH ಫೌಂಡೇಶನ್) ಪ್ರತಿಷ್ಠಾನದ ಗಾಂಧಿ ಅಧ್ಯಯನ ಕೇಂದ್ರದಲ್ಲಿ ಕಸ್ತೂರ ಬಾ ಗಾಂಧಿ ಅವರ ಜನ್ಮ ದಿನಾಚರಣೆ ಅಂಗವಾಗಿ ಗ್ರಾಮೀಣ ಪ್ರತಿಭೆಗಳಿಗಾಗಿ ರಂಗೋಲಿ ಸ್ಪರ್ಧೆ ಮತ್ತು ಮಹಿಳಾ ಹೋರಾಟಗಾರರ ಬಗ್ಗೆ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.

ನಿರ್ಣಾಯಕರಾಗಿ ವಿ. ಡಿ. ಹಟ್ಟಿಹೊಳಿ, ನಿವೃತ್ತ ಮುಖ್ಯೋಪಾದ್ಯಾಯರು, ಎಂ. ಎಸ್. ಗಿಡಮೂಡಿ, ನ್ಯಾಯವಾದಿಗಳು, ಜಿಲ್ಲಾ ನ್ಯಾಯಾಲಯ ಧಾರವಾಡ ಮತ್ತು ಮಡಿವಾಳಪ್ಪ ಮೆಳವಂಕಿ, ನಿವೃತ್ತ ದೈಹಿಕ ತರಬೇತುದಾರರು, ಭಾರತೀಯ ಸೇನೆ ಭಾಗವಹಿಸಿದ್ದರು.

ರಂಗೋಲಿ ಸ್ಪರ್ಧೆಯಲ್ಲಿ ಗೀತಾ ಮಾಟೊಳ್ಳಿ ಪ್ರಥಮ, ಲಕ್ಷ್ಮಿ ಒಡೆಯರ ದ್ವಿತೀಯ ಮತ್ತು ಐಶ್ವರ್ಯ ವಗ್ಗನವರ ತೃತೀಯ ಸ್ಥಾನ ಗಳಿಸಿದರು.

Home add -Advt

ಭಾಷಣ ಸ್ಪರ್ಧೆಯಲ್ಲಿ ಅಶ್ವಿನಿ ಆನಿಕಿವಿ ಪ್ರಥಮ, ಐಶ್ವರ್ಯ ವಗ್ಗನವರ ದ್ವಿತೀಯ ಮತ್ತು ಲಕ್ಷ್ಮಿ ಲಕ್ಕುಂಡಿ ತೃತೀಯ ಸ್ಥಾನ ಗಳಿಸಿದರು.

ಪ್ರತಿಷ್ಠಾನದ ಸ್ವಯಂ ಸೇವಕ ಮೈಲಾರ ಆನಿಕಿವಿ ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನದ ಅಧ್ಯಕ್ಷೆ ದೀಪಾ ಹೊಂಗಲ ಅವರು ವಂದಿಸಿದರು. ಗಣ್ಯರಾದ ಚನ್ನಬಸಪ್ಪ ಹೊಂಗಲ, ಬಸವರಾಜ ಆನಿಕಿವಿ, ಕುಬೇರ ಹಣಬರ, ಈರಪ್ಪ ಹಸಬಿ, ರುದ್ರಪ್ಪ ಆನಿಕಿವಿ ಉಪಸ್ಥಿತರಿದ್ದರು.

Related Articles

Back to top button