
ಪ್ರಗತಿ ವಾಹಿನಿ ಸುದ್ದಿ ಯಲ್ಲಾಪುರ : ಬ್ಯಾಂಕ್ ಆಪ್ ಬರೋಡಾದ ಯಲ್ಲಾಪುರ ಶಾಖೆಯ ಅಧಿಕಾರಿಯೊಬ್ಬ ಬ್ಯಾಂಕಿನ 2.69 ಕೋಟಿಗೂ ಹೆಚ್ಚಿನ ಹಣವನ್ನು ಲಪಟಾಯಿಸಿದ್ದಾಗಿ ದೂರು ದಾಖಲಾಗಿದೆ.
ಬ್ಯಾಂಕ್ ಆಫ್ ಬರೋಡಾದ ಯಲ್ಲಾಪುರ ಶಾಖೆಯ ಅಸಿಸ್ಟೆಂಟ್ ಮ್ಯಾನೇಜರ್, ಆಂಧ್ರಪ್ರದೇಶದ ಅನಂತಪುರ ಮೂಲದ ಕುಮಾರ ಕೃಷ್ಣಮೂರ್ತಿ ಬೋನಾಲ ಹಣ ಲಪಟಾಯಿಸಿದ ಆರೋಪಿ.
ಈತ 2022 ರ ಏಪ್ರಿಲ್ ನಿಂದ ಸೆ. 5 ರ ನಡುವಿನ ಅವಧಿಯಲ್ಲಿ ಬ್ಯಾಂಕ್ ಆಫ್ ಬರೋಡಾ ಶಾಖೆಯು ಎಸ್ ಬಿಐನಲ್ಲಿ ಹೊಂದಿರುವ ಕರೆಂಟ್ ಅಕೌಂಟ್ ಖಾತೆಯ ಮೂಲಕ 2,69,95000 ರೂ.ಗಳನ್ನು ತನ್ನ ಪತ್ನಿ ರೇವತಿ ಪ್ರಿಯಾಂಕ ಗೊರ್ರೆಯ ಆಂಧ್ರ ಪ್ರದೇಶದ ಬ್ಯಾಂಕ್ ಒಂದರಲ್ಲಿ ಹೊಂದಿರುವ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದ ಎಂದು ಆರೋಪಿಸಲಾಗಿದೆ.
ಹೀಗೆ ಹಣ ವರ್ಗಾವಣೆ ಮಾಡಲು ಈತ ಬ್ಯಾಂಕ್ ಆಫ್ ಬರೋಡಾದ ಸಿಬ್ಬಂದಿಯಾದ ಸಂಜೀವ ಭಟ್ ಮತ್ತು ನಾಗೇಂದ್ರ ಎಂಬುವವರ ಲಾಗ್ ಇನ್ ಅನ್ನು ಅವರಿಗೆ ತಿಳಿಯದಂತೆ ಬಳಸಿಕೊಂಡಿದ್ದ. ಈ ಕುರಿತು ಬ್ಯಾಂಕ್ ಆಫ್ ಬರೋಡಾದ ಯಲ್ಲಾಪುರ ಶಾಖೆಯ ಮ್ಯಾನೇಜರ್ ವಿಘ್ನೇಶ್ವರ ಗಣಪತಿ ಭಟ್ ಅವರು ಯಲ್ಲಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ತನಿಖೆ ನಡೆಸಿದ್ದಾರೆ.
https://pragati.taskdun.com/latest/the-price-of-nandini-milk-is-rs-3-increase/
ಎಲೆಕ್ಟ್ರಿಕ್ ಬೈಕ್ ಗೆ ಮಾಲಿನ್ಯ ಪ್ರಮಾಣಪತ್ರವಿಲ್ಲ ಎಂದು ದಂಡ ವಿಧಿಸಿದ ಪೊಲೀಸರು
https://pragati.taskdun.com/latest/electrick-bikefinekerala-policeno-puc/