Karnataka NewsPolitics

*ಜ.2 ರವರೆಗೆ ರೆಸ್ಟ್ ಮಾಡಲು ಸಿಎಂಗೆ ವೈದ್ಯರ ಸಲಹೆ*

ಪ್ರಗತಿವಾಹಿನಿ ಸುದ್ದಿ : ರಾಜ್ಯದಲ್ಲಿ ಉಪಚುನಾವಣೆ ಘೋಷಣೆಯಾದ ದಿನಗಳಿಂದ ವಿವಿಧ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಪ್ರಚಾರ, ಜಿಲ್ಲಾ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಅವರು ಜ.2ರವರೆಗೆ ರಜೆ ಪಡೆಯಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.

ಇತ್ತೀಚೆಗೆ ಬೆಳಗಾವಿಯ ಚಳಿಗಾಲದ ಅಧಿವೇಶ, ನಂತರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಮಾರಂಭ, ಮೊನ್ನೆಯಷ್ಟೇ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆ ಸಿಎಂ ಪಾಲ್ಗೊಂಡಿದ್ದರು. ಹೀಗೆ ಸಾಲು-ಸಾಲು, ಕಾರ್ಯಕ್ರಮ, ಪ್ರವಾಸ, ಸಮಾರಂಭಗಳಲ್ಲಿ ಸಿಎಂ ಭಾಗಿಯಾಗಿ ಸುಸ್ತಾಗಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

Home add -Advt

ಇನ್ನು ಜನವರಿ ನಂತರದಲ್ಲಿ ಸಿಎಂ ಅವರು ಬಜೆಟ್ ಪೂರ್ವಭಾವಿ ಸಭೆಯನ್ನು ನಡೆಸಬೇಕಿದೆಯಂತೆ. ಹೀಗಾಗಿ ವೈದ್ಯರು ಸಿಎಂ ಅವರಿಗೆ ಸ್ವಲ್ಪ ವಿಶ್ರಾಂತಿ ಪಡೆಯುವಂತೆ ನಿನ್ನೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಮನಮೋಹನ್ ಸಿಂಗ್ ಅವರ ನಿಧನದ ನಿಮಿತ್ತ ರಾಜ್ಯದಲ್ಲಿ ಒಂದು ವಾರಗಳ ಕಾಲ ಶೋಕಾಚರಣೆ ಇದೆ. ಜ.2ರವರೆಗೆ ಶೋಕಾಚರಣೆ ಇರಲಿದ್ದು, ಅಲ್ಲಿಯವರೆಗೆ ರೆಸ್ಟ್ ಮಾಡಿ ಎಂದು ವೈದ್ಯರು ಸಲಹೆ ಕೊಟ್ಟಿದ್ದಾರೆ. ಆದ್ದರಿಂದ ಸಿಎಂ ಜ.2ರವರೆಗೆ ಬಹುತೇಕ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗದೇ ರಜೆಯಲ್ಲಿರಲಿದ್ದಾರೆ ಎಂದು ಹೇಳಲಾಗುತ್ತಿದೆ.

Related Articles

Back to top button