Politics

*ಇನ್ನು ಮುಂದೆ ಪಕ್ಷದ ಒಳತಿಗಾಗಿ ನಮ್ಮ ಹೋರಾಟ: ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್*

ಪ್ರಗತಿವಾಹಿನಿ ಸುದ್ದಿ : ಇನ್ನು ಮುಂದೆ ಪಕ್ಷದ ಒಳತಿಗಾಗಿ ಮಾಡು ಇಲ್ಲವೇ ಮಡಿ ನಮ್ಮ ಹೋರಾಟ. ದೆಹಲಿಯಲ್ಲೂ ಮತ್ತೆ ಸಭೆ ಮಾಡುತ್ತೇವೆ. ಅಲ್ಲಿಯೇ ರಾಜ್ಯಾಧ್ಯಕ್ಷ ಸ್ಪರ್ಧೆ ಬಗ್ಗೆ ತೀರ್ಮಾನಿಸಿ ಅಭ್ಯರ್ಥಿಯನ್ನು ಪ್ರಕಟಿಸುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಹೇಳಿದರು.‌

ಇಂದು ಕುಮಾರ್ ಬಂಗಾರಪ್ಪ ಅವರ ನಿವಾಸದಲ್ಲಿ ಬಿಜೆಪಿಯ ಭಿನ್ನಮತೀಯ ನಾಯಕರ ಸಭೆ ನಡೆಯಿತು. ಸಭೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಅವರು, ಪಕ್ಷದ ರಾಜ್ಯಾಧ್ಯಕ್ಷರಾದವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬ ಭಾವನೆ ಮೂಡಬೇಕು. ಆದರೆ ವಿಜಯೇಂದ್ರ ಹಾಗೇ ಮಾಡುತ್ತಿಲ್ಲ. ರಾಜ್ಯಾಧ್ಯಕ್ಷ ಎಂದರೆ ಕೇವಲ ಒಂದು ಟೀಂನ ನಾಯಕನಲ್ಲ. ಇಡೀ ಪಕ್ಷಕ್ಕೆ ನಾಯಕನಾಗಿರಬೇಕು. ನಾಯಕತ್ವದ ಬಗ್ಗೆ ವಿಜಯೇಂದ್ರಗೆ ಏನೂ ಗೊತ್ತಿಲ್ಲ. ನಾಯಕತ್ವವು ನಮಗೆ ಎಲ್ಲೂ ಕಾಣಿಸುತ್ತಿಲ್ಲ. ಬರೀ ವಿಜಯೇಂದ್ರನ ಉದ್ಧಟತನ ಕಾಣಿಸುತ್ತಿದೆ ಎಂದು ಗುಡುಗಿದರು.

ವಿಶ್ವಾಸಕ್ಕೆ ತೆಗೆದುಕೊಳ್ಳದೇ ಜಿಲ್ಲಾಧ್ಯಕ್ಷರ ನೇಮಕ ಮಾಡಲಾಗಿದೆ. ಅರ್ಹರಲ್ಲದವರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಲಾಗಿದೆ. ಹೀಗೆ ಮಾಡಿದರೆ ಪಕ್ಷದ ಅಸ್ಥಿತ್ವ ಎಲ್ಲಿ ಉಳಿಯುತ್ತದೆ? ನೇರವಾಗಿ ಆರೋಪಗಳು ಹೊತ್ತಿರುವವರನ್ನು, ಬೇರೆ ಪಕ್ಷದಿಂದ ಬಂದಿರುವವರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಿಕೊಂಡಿದ್ದಾರೆ. ಇದು ಪಕ್ಷದ ಭವಿಷ್ಯದ ಬಗ್ಗೆ ನಮಗೆ ಆತಂಕ ಮೂಡಿಸಿದೆ. ಹೀಗಾಗಿ ಇದು ಕೊನೆಯಾಗಬೇಕು ಎಂಬುವುದು ನಮ್ಮ ಬೇಡಿಕೆ ಎಂದು ಯತ್ನಾಳ್ ಕಿಡಿಕಾರಿದರು.

Home add -Advt

Related Articles

Back to top button