Kannada NewsKarnataka NewsLatest
ಶಂಕರಗೌಡ ಪಾಟೀಲ ಇಂದು ಬೆಳಗಾವಿಗೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ– ಕರ್ನಾಟಕ ಸರಕಾರದ ದೆಹಲಿಯ ವಿಶೇಷ ಪ್ರತಿನಿಧಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಶಂಕರಗೌಡ ಪಾಟೀಲ ಇಂದು ಬೆಳಗಾವಿಗೆ ಆಗಮಿಸಲಿದ್ದಾರೆ.
ಶುಕ್ರವಾರ ಸಂಜೆ 4 ಗಂಟೆಗೆ ವಿಮಾನದ ಮೂಲಕ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಅವರು ಆಗಮಿಸಲಿದ್ದು, ಅಭಿಮಾನಿಗಳು ಅವರನ್ನು ಸ್ವಾಗತಿಸಲಿದ್ದಾರೆ.
ಶಂಕರಗೌಡ ಪಾಟೀಲ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿದ್ದರು. ಈಚೆಗೆ ಸರಕಾರ ಅವರನ್ನು ದೆಹಲಿ ಪ್ರತಿನಿಧಿಯಾಗಿ ನೇಮಿಸಿ ಆದೇಶ ಹೊರಡಿಸಿತ್ತು. ನಂತರ ದೆಹಲಿಗೆ ತೆರಳಿ ಅಧಿಕಾರ ಸ್ವೀಕರಿಸಿ ಅಧಿಕಾರಿಗಳ ಸಭೆ ನಡೆಸಿದ್ದರು. ಇಂದು ತವರು ಜಿಲ್ಲೆ ಬೆಳಗಾವಿಗೆ ಆಗಮಿಸುತ್ತಿದ್ದಾರೆ.
ಶಂಕರಗೌಡ ಪಾಟೀಲ ಅಧಿಕಾರ ಸ್ವೀಕಾರ; ಕಾಲಮಿತಿಯಲ್ಲಿ ಬಾಕಿ ಪ್ರಸ್ತಾವನೆಗಳ ವಿಲೇವಾರಿ
ಶಂಕರಗೌಡ ಪಾಟೀಲ ಈಗ ದೆಹಲಿಯ ವಿಶೇಷ ಪ್ರತಿನಿಧಿ; ಸಂಪುಟ ದರ್ಜೆ ಸ್ಥಾನಮಾನ
ಶಂಕರಗೌಡ ಪಾಟೀಲ ನೇಮಕ: ಅಭಿಮಾನಿಗಳಿಂದ ಪೂಜೆ, ಸಂಭ್ರಮ



