Kannada NewsLatest
ಬಸವರಾಜ್ ಹೊರಟ್ಟಿಗೆ ನೋಟಿಸ್ ಜಾರಿಗೊಳಿಸಿದ ಬೆಳಗಾವಿ ಪ್ರಾದೇಶಿಕ ಆಯುಕ್ತ ಆಮ್ಲನ್ ಬಿಸ್ವಾಸ್

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಧಾನ ಪರಿಷತ್ ಸಭಾಪತಿ ಪೀಠ ದುರ್ಬಳಕೆ ಆರೋಪ ಹಿನ್ನೆಲೆಯಲ್ಲಿ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ್ ಹೊರಟ್ಟಿ ಅವರಿಗೆ ನೋಟೀಸ್ ಜಾರಿಗೊಳಿಸಲಾಗಿದೆ.
ಬಸವರಾಜ ಪಥ ಪುಸ್ತಕದ ಮುಖಪುಟದ ಮೇಲೆ ರಾಷ್ಟ್ರೀಯ ಲಾಂಛನ ಬಳಸಿದ ಆರೋಪ ಹಾಗೂ ಪರಿಷತ್ ಪೀಠದ ದುರ್ಬಳಕೆ ಆರೋಪದ ಮೇಲೆ ಹೊರಟ್ಟಿ ಅವರಿಗೆ ಕಾರಣ ಕೇಳಿ ನೋಟೀಸ್ ಜಾರಿಗೊಳಿಸಲಾಗಿದೆ ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ.
ರಿಪ್ರೆಸೆಂಟ್ ಆಫ್ ಪಿಪಲ್ ಆಕ್ಟ್ ಅಡಿಯಲ್ಲಿ 123 ಎ ಹಾಗೂ 127 ಎ ಆಕ್ಟ್ ಅಡಿಯಲ್ಲಿ ನೋಟೀಸ್ ಜಾರಿ ಮಾಡಲಾಗಿದೆ. 123 ಎ ಪ್ರಕಾರ ಚುನಾವಣೆ ಸಂದರ್ಭದಲ್ಲಿ ರಾಷ್ಟ್ರ ಲಾಂಛನ ಬಳಕೆ ಮಾಡಬಾರದು. ಜಿಲ್ಲಾಧಿಕಾರಿ ಪರವಾನಿಗೆ ಇಲ್ಲದೇ ಪುಸ್ತಕ ಪ್ರಿಂಟ್ ಮಾಡುವಂತಿಲ್ಲ. ಈ ಹಿನ್ನೆಲೆಯಲ್ಲಿ ನೋಟೀಸ್ ನೀಡಲಾಗಿದೆ.
ಅಥಣಿ ತಹಶೀಲ್ದಾರ್ ಅಮಾನತು



