Karnataka News

ಜನವರಿ 15ರಂದು ಸಿಎಂ ಶಿರಸಿಗೆ; ಅರಣ್ಯ ಅತಿಕ್ರಮಣದಾರರಿಂದ ಅಂದೇ ಪ್ರತಿಭಟನೆ

ಪ್ರಗತಿ ವಾಹಿನಿ ಸುದ್ದಿ, ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ಜನೆವರಿ 15ರಂದು ಶಿರಸಿಯಲ್ಲಿ ಪ್ರತಿಭಟನೆ ನಡೆಯಲಿದೆ.

 

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಜನವರಿ 15 ರಂದು ಶಿರಸಿಗೆ ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅರಣ್ಯವಾಸಿಗಳ ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ಅಂದು ಮುಂಜಾನೆ 9:30 ರಿಂದ 11 ಗಂಟೆಯವರೆಗೆ ಶಿರಸಿಯ ಹಳೇ ಬಸ್‌ ನಿಲ್ದಾಣದ ಸರ್ಕಲ್, ಬಿಡ್ಕಿ ಬೈಲಿನ  ಗಾಂಧಿ ಪ್ರತಿಮೆ ಎದುರು ಧರಣಿ  ಹಮ್ಮಿಕೊಳ್ಳಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ಸಾಕಷ್ಟು ಸಲ ವಿವಿಧ ರೀತಿಯ ಹೋರಾಟ ಮತ್ತು ಪ್ರತಿಭಟನೆ ಜರುಗಿಸಿದ್ದಾಗಿಯೂ ಸರಕಾರ ಸ್ಪಂದಿಸದೇ ಇರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ಅರಣ್ಯವಾಸಿಗಳ ಸಮಸ್ಯೆಗಳನ್ನ ತಲುಪಿಸುವ  ಉದ್ದೇಶದಿಂದ ಧರಣಿ  ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
https://pragati.taskdun.com/h-vishwanath-said-he-is-joining-congress/

Home add -Advt

Related Articles

Back to top button