Latest

ಸಾರಿಗೆ ನೌಕರರ ಬೆನ್ನಲ್ಲೇ ಪ್ರತಿಭಟನೆಗಿಳಿದ ಶಿಕ್ಷಕರು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಒಂದೆಡೆ ರೈತರು ಮತ್ತೆ ಪ್ರತಿಭಟನೆ ಆರಂಭಿಸಿದರೆ ಇನ್ನೊಂದೆಡೆ ಖಾಸಗಿ ಶಾಲಾ ಶಿಕ್ಷಕರು ಧರಣಿ ನಡೆಸುತ್ತಿದಾರೆ.

ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವಿಶೇಷ ಅನುದಾನ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ವಿಮಾ ಸೌಲಭ್ಯ, ಶಿಕ್ಷಕರನ್ನು ಕೊರೊನಾ ಯೋಧರೆಂದು ಪರಿಗಣಿಸಬೇಕು, ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜಧಾನಿಯಲ್ಲಿ ಶಿಕ್ಷಕರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ.

Home add -Advt

ಪ್ರತಿಭಟನಾ ರ್ಯಾಲಿ ಬಳಿಕ ಶಿಕ್ಷಕರು ಫ್ರೀಡಂ ಪಾರ್ಕ್ ನಲ್ಲಿ ಧರಣಿ ನಡೆಸುತ್ತಿದ್ದು, ಬಸವರಾಜ್ ಹೊರಟ್ಟಿ ಕೂಡ ಶಿಕ್ಷಕರಿಗೆ ಸಾಥ್ ನೀಡಿದ್ದಾರೆ. ಈ ನಡುವೆ ಪ್ರತಿಭಟನಾ ಸ್ಥಳಕ್ಕೆ ಸಚಿವರಾದ ಆರ್.ಅಶೋಕ್, ಬಸವರಾಜ್ ಬೊಮ್ಮಾಯಿ ಭೇಟಿ ನೀಡಿದ್ದು ಧರಣಿ ಹಿಂಪಡೆಯುವಂತೆ ಶಿಕ್ಷಕರ ಮನವೊಲಿಕೆ ಮಾಡುತ್ತಿದ್ದಾರೆ.

Related Articles

Back to top button