Latest

*ಪ್ರವಾಸಿ ಮಂದಿರದಲ್ಲಿಯೇ ಆತ್ಮಹತ್ಯೆಗೆ ಶರಣಾದ PWD ಅಧಿಕಾರಿ*

ಪ್ರಗತಿವಾಹಿನಿ ಸುದ್ದಿ; ನೆಲಮಂಗಲ: ಕಚೇರಿಗೆ ಸಂಬಂಧಿಸಿದ ಫೈಲ್ ಕಾಣೆಯಾಗಿದೆ ಎಂಬ ಕಾರಣಕ್ಕೆ ಪ್ರವಾಸಿ ಮಂದಿರದಲ್ಲಿಯೇ ಪಿಡಬ್ಲ್ಯುಡಿ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.

ಲಕ್ಷ್ಮಿನರಸಿಂಹಯ್ಯ (56) ಮೃತ ಅಧಿಕಾರಿ. ನೆಲಮಂಗಲದ ಶಿವಗಂಗೆಯ ಪ್ರವಾಸಿ ಮಂದಿರದಲ್ಲಿ ಲಕ್ಷ್ಮಿನರಸಿಂಹಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತುಮಕೂರು ಜಿಲ್ಲೆಯ ಮಧುಗಿರಿ ನಿವಾಸಿಯಾಗಿರುವ ಲಕ್ಷ್ಮಿನರಸಿಂಹಯ್ಯ, ಹಲವು ವರ್ಷಗಳಿಂದ ಮಧುಗಿರಿ ಪಿಡ್ಬ್ಲುಡಿದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕಚೇರಿಗೆ ಸಂಬಂಧಿಸಿದ ಫೈಲ್ ಮಿಸ್ಸಾಗಿದ್ದಂಕ್ಕೆ ಇತ್ತೀಚೆಗೆ ಆತಂಕಕ್ಕೀಡಾಗಿದ್ದರು. ಈ ಬಗ್ಗೆ ಕುಟುಂಬದವರ ಜೊತೆಗೂ ಮಾತನಾಡಿದ್ದರು.

ಇದೀಗ ಶಿವಗಂಗೆಯ ಪ್ರವಾಸಿ ಮಂದಿರದಲ್ಲಿ ಅಧಿಕಾರಿ ಲಕ್ಷ್ಮಿನರಸಿಂಹಯ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ದಾಬಸ್ ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Home add -Advt

*ಸಾಕ್ಷಾತ್ಕಾರ ಸಿನಿಮಾ ಖ್ಯಾತಿಯ ನಟಿ ಜಮುನಾ ನಿಧನ*

https://pragati.taskdun.com/jamunano-moresakshatkara-actress/

Related Articles

Back to top button