Latest

ಸ್ಪಟಿಕ ಸ್ಪಷ್ಟ ನದಿಯಲ್ಲಿ ಮಹಿಳೆ ದೋಣಿಯಾನ: ಸಖತ್ ವೈರಲ್ ಆದ ಅಪರೂಪದ ವಿಡಿಯೊ

ಪ್ರಗತಿವಾಹಿನಿ ಸುದ್ದಿ, ಶಿಲ್ಲಾಂಗ್: ಇದು ಫೋಟೋಗ್ರಾಫಿಯ ತಂತ್ರಗಾರಿಕೆಯೋ, ಗ್ರಾಫಿಕ್ ಗಿಮಿಕ್ಕೋ ಎಂದು ತಿಳಿದರೆ ತಪ್ಪಾದೀತು. ಇದೊಂದು ಸ್ಫಟಿಕದಷ್ಟೇ ಸ್ಪಷ್ಟ ನದಿಯ ನೈಜ ಚಿತ್ರ.

ಮೇಘಾಲಯದ ಸ್ಫಟಿಕ-ಸ್ಪಷ್ಟ ಉಮ್ಗೋಟ್ ನದಿಯಲ್ಲಿ ಮಹಿಳೆಯನ್ನು ಹೊತ್ತೊಯ್ಯುತ್ತಿರುವ ದೋಣಿಯನ್ನು ತೋರಿಸುವ ವಿಡಿಯೋ ಒಂದು ಸಖತ್ ವೈರಲ್ ಆಗಿದೆ. ಫೆ. 2 ರಂದು ‘ಗೋ ಅರುಣಾಚಲ ಪ್ರದೇಶ’ ಟ್ವಿಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ.

ಕೇಂದ್ರ ಸರ್ಕಾರ 2021 ರ ನವೆಂಬರ್ ನಲ್ಲಿ  ಉಮ್ಗೋಟ್ ನದಿಯಲ್ಲಿ ದೋಣಿಯ ಫೋಟೋವನ್ನು ಹಂಚಿಕೊಂಡಿತ್ತು. ಇದು ವಿಶ್ವದ ಅತ್ಯಂತ ಸ್ವಚ್ಛ ನದಿಗಳಲ್ಲಿ ಒಂದಾಗಿದೆ ಎಂದು ಹೇಳಿಕೊಂಡಿತ್ತು.

Home add -Advt

ಬಹುತೇಕ ನದಿಗಳು ಮಾಲಿನ್ಯದ ಸಮಸ್ಯೆಗೆ ಸಿಲುಕಿದ್ದರೆ ಮೇಘಾಲಯದ ಸ್ವಚ್ಛ ನದಿಯ ವೀಡಿಯೊ ಅನೇಕರಲ್ಲಿ ಅಚ್ಚರಿ ಹುಟ್ಟಿಸಿದೆ. ಮನುಷ್ಯನ ಮನಸ್ಸು ಮಲೀನವಾಗದಿದ್ದರೆ ಪ್ರಕೃತಿಯಲ್ಲಿ ಮಾಲಿನ್ಯ ಉಳಿಯಲಾರದೆಂಬುದನ್ನು ಈ ನದಿ ತೋರಿಸುತ್ತಿದೆ.

ಉಮ್ಗೋಟ್ ನದಿ ಜಗತ್ತಿನಲ್ಲೇ ಅತ್ಯಂತ ಸ್ವಚ್ಛ ನದಿ ಎಂದು ಹೆಸರಾಗಿದೆ. ಇದನ್ನು ಡವ್ಕಿ ನದಿ ಎಂದೂ ಕರೆಯುತ್ತಾರೆ. ಈ ನದಿಯ ಮೇಲ್ಮೈಯಿಂದ ನದಿಯ ಆಳದಲ್ಲಿರುವ ಪರಿಸರದ ಉಸುಕು, ಬೆಣಚುಕಲ್ಲು, ಸಸ್ಯಗಳೆಲ್ಲ ಗಾಜಿನಲ್ಲಿ ಕಂಡಂತೆ ಸ್ಪಷ್ಟವಾಗಿ ಗೋಚರಿಸುತ್ತವೆ. ಹಚ್ಚ ಹಸಿರು ಬೆಟ್ಟಗಳಿಂದ ಸುತ್ತುವರಿದ ಈ ಸ್ಥಳ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರಾಗಿದೆ.

*ಅಂತರರಾಷ್ಟ್ರೀಯ ಕ್ಯಾನ್ಸರ್ ದಿನಾಚರಣೆ*

https://pragati.taskdun.com/international-cancer-daybelagavihnji-cancer-hospital/

*ಮಹಾಶಿವರಾತ್ರಿ ಮಹೋತ್ಸವ; ನಿಡಸೋಸಿಯ ಜಗದ್ಗುರು ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ*

https://pragati.taskdun.com/mahashivaratri-mahotsavanidasosiduradundishwara-sidda-samstana/

*ನಿವೃತ್ತ ನೌಕರರ ಸಂಘದ ಸಮಾವೇಶ*

https://pragati.taskdun.com/retired-employees-associationsamaveshabelagavidr-l-bhairappa/

Related Articles

Back to top button