Kannada NewsNationalPolitics

*ಸಂಸತ್ ಚಳಿಗಾಲದ ಅಧಿವೇಶನ ಆರಂಭ: ಮೊದಲ ದಿನವೇ ವಿಪಕ್ಷಗಳಿಂದ ಗದ್ದಲ-ಕೋಲಾಹಲ*

ಪ್ರಗತಿವಾಹಿನಿ ಸುದ್ದಿ: ಸಂಸತ್ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಕಲಾಪದ ಆರಂಭದ ದಿನವೇ ವಿಪಕ್ಷಗಳು ಗದ್ದಲ-ಕೋಲಾಹಲ ಆರಂಭಿಸಿರುವ ಘಟನೆ ನಡೆದಿದೆ.

ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಲೋಕಸಭೆ ಕಲಾಪದ ಆರಂಭದಲ್ಲಿ ವಿಶ್ವಕಪ್ ಗೆದ್ದಿರುವ ಭಾರತದ ಮಹಿಳಾ ಕ್ರಿಕೆಟ್ ತಂಡ ಹಾಗೂ ಅಂಧರ ಮಹಿಳಾ ಕ್ರಿಕೆಟ್ ಮತ್ತು ಕಬಡ್ಡಿ ತಂಡವನ್ನು ಅಭಿನಂದಿಸಲಾಯಿತು.

Home add -Advt

ಬಳಿಕ ಪ್ರಶ್ನೋತ್ತರ ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷಗಳು ಎಸ್ ಐ ಆರ್ ಹಾಗೂ ವೋಟ್ ಚೋರಿ ಕುರಿತು ಚರ್ಚೆಗೆ ಆಗ್ರಹಿಸಿ ಗದ್ದಲ ಸೃಷ್ಟಿದವು. ವಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಪೀಕರ್ ಓಂ ಬಿರ್ಲಾ, ಲೋಕಸಭಾ ಕಲಾಪವನ್ನು ಮಧ್ಯಾಹ್ನ 12ಗಂಟೆಯವರೆಗೆ ಮುಂದೂಡಿದರು.

Related Articles

Back to top button