Karnataka News

*ಜಸ್ಟಿಸ್ ಕುನ್ಹಾ ಆಯೋಗದ ಅವಧಿ ವಿಸ್ತರಿಸಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ*

ಪ್ರಗತಿವಾಹಿನಿ ಸುದ್ದಿ: ಆರ್ ಸಿಬಿ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ದುರಂತದಲ್ಲಿ 11 ಜನರು ಸಾವನ್ನಪ್ಪಿದ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ಕುನ್ಹಾ ನೇತೃತ್ವದ ಆಯೋಗಕ್ಕೆ ವಹಿಸಿದೆ. ಈ ನಡುವೆ ಜಸ್ಟಿಸ್ ಕುನ್ಹಾ ಆಯೋಗದ ಅವಧಿಯನ್ನು ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.

ಜಸ್ಟಿಸ್ ಕುನ್ಹಾ ಆಯೋಗ ಪ್ರಸ್ತುತ ಚಾಮರಾಜನಗರದ ಆಕ್ಸಿಜನ್ ದುರಂತ ಪ್ರಕರಣದ ಬಗ್ಗೆ ವಿಚಾರಣೆ ನಡೆಸುತ್ತಿದೆ. ಅದಕ್ಕೂ ಮುಂಚಿತವಾಗಿ ಬೆಂಗಳೂರು ಕಾಲ್ತುಳಿತ ದುರಂತದ ವರದಿ ನೀಡುವಂತೆ ಸರ್ಕಾರ ಆಯೊಗಕ್ಕೆ ಸೂಚನೆ ನೀಡಿದೆ. ಬಳಿಕ ಚಾಮರಾಜನಗರದ ಆಕ್ಸಿಜನ್ ದುರಂತದ ಬಗ್ಗೆ ಪರಿಶೀಲನೆ ಮುಂದುವರಿಸುವಂತೆ ತಿಳಿಸಿದೆ.

Home add -Advt

ಈ ಹಿನ್ನೆಲೆಯಲ್ಲಿ ಜಸ್ಟಿಸ್ ಕುನ್ಹಾ ಆಯೋಗದ ಅವಧಿಯನ್ನು ಆಗಸ್ಟ್ 31ವರೆಗೆ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Related Articles

Back to top button