Kannada NewsKarnataka NewsLatest

2019-20ರ ಹಂಗಾಮಿನ 2ನೇ ಕಂತು ಪ್ರತಿ ಟನ್ ಗೆ 225 ರೂ. ಘೋಷಣೆ

ಪ್ರಗತಿವಾಹಿನಿ ಸುದ್ದಿ, ಗೋಕಾಕ – ಸತೀಶ ಶುಗರ‍್ಸ ಕಾರ್ಖಾನೆಗೆ  ಕಳೆದ ೨೦೧೯-೨೦ರ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರ ಪ್ರತಿ ಟನ್ ಕಬ್ಬಿಗೆ ಪ್ರಥಮ ಕಂತಾಗಿ ರೂ.೨೫೦೦ ರಂತೆ ದರವನ್ನು ಈಗಾಗಲೇ ಪಾವತಿಸಲಾಗಿದೆ.

ಎರಡನೇ ಕಂತನ್ನು ಘೋಷಿಸಲು ಆಡಳಿತ ಮಂಡಳಿಯಲ್ಲಿ ನಿರ್ಣಯ ಕೈಗೊಂಡಿದ್ದು, ಎರಡನೇ ಕಂತಾಗಿ ಪ್ರತಿ ಟನ್‌ಗೆ ರೂ.೨೨೫ ರಂತೆ ಘೋಷಿಸಲು ನಿರ್ಧರಿಸಲಾಗಿದೆ.

ಈ ಎರಡನೇ ಕಂತನ್ನು ಒಂದು ವಾರದ ಒಳಗಾಗಿ ಸಂಬಂಧಪಟ್ಟ ರೈತರ ಬ್ಯಾಂಕ ಖಾತೆಗಳಿಗೆ ಹಣ ಜಮಾ ಮಾಡಲಾಗುವುದು. ೨೦೧೯-೨೦ರ ಹಂಗಾಮಿನ ಪ್ರತಿ ಟನ್ ಕಬ್ಬಿನ ದರ ಒಟ್ಟು ೨೭೨೫/- ರಂತೆ ಪಾವತಿಸಿದಂತಾಗುವುದು. ಕಬ್ಬು ಕಟಾವು ಮತ್ತು ಕಬ್ಬು ಸಾರಿಗೆ ದರವನ್ನು ಪ್ರತ್ಯೇಕವಾಗಿ ನೀಡಲಾಗಿದೆ.

ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರ ಸಹಾಯ ಮತ್ತು ಸಹಕಾರದಿಂದಾಗಿ ಸತತ ಯಶಸ್ಸನ್ನು ಸಾಧಿಸಲಾಗಿದ್ದು, ಪ್ರಸಕ್ತ ೨೦೨೦-೨೧ ರ ಹಂಗಾಮನ್ನು ರವಿವಾರ  ಪ್ರಾರಂಭಿಸಲಾಗುವುದು. ಈಗಾಗಲೇ ಕಬ್ಬು ಕಟಾವು ಆದೇಶ ನೀಡಲಾಗಿದೆ. ಪ್ರಸಕ್ತ ಹಂಗಾಮಿನಲ್ಲಿಯೂ ರೈತರು ಪೂರೈಸುವ ಕಬ್ಬಿಗೆ ಯೋಗ್ಯ ದರ ನೀಡಲಾಗುವುದು ಎಂದು  ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಸಿದ್ಧಾರ್ಥ ವಾಡೆನ್ನವರ್ ತಿಳಿಸಿದ್ದಾರೆ.

Home add -Advt

ಪ್ರಸಕ್ತ ಹಂಗಾಮಿನಲ್ಲಿ ಉತ್ತಮ ಗುರಿ ಸಾಧಿಸುವ ನಿರೀಕ್ಷೆ ಹೊಂದಿದ್ದು, ಇದು ರೈತರ ಸಹಾಯ ಮತ್ತು ಸಹಕಾರದಿಂದ ಮಾತ್ರ ಸಾಧ್ಯ. ಕಾರ್ಖಾನೆಗೆ ಕಬ್ಬು ಪೂರೈಸುವ ಸಮಸ್ತ ರೈತರು ಈ ಹಿಂದೆ ಹೆಚ್ಚು ಕಬ್ಬು ಪೂರೈಸಿ ಕಾರ್ಖಾನೆಯ ಪ್ರಗತಿಗೆ ಸಹಕರಿಸಿದಂತೆ ಪ್ರಸಕ್ತ ಹಂಗಾಮಿನಲ್ಲಿಯೂ ಒಳ್ಳೆಯ ಗುಣಮಟ್ಟ, ಒಳ್ಳೆಯ ರಿಕವರಿ ಇರುವ ಕಬ್ಬನ್ನು ಕಾರ್ಖಾನೆಗೆ ಪೂರೈಸಿ ಯಶಸ್ಸಿನಲ್ಲಿ ಭಾಗಿಯಾಗಬೇಕೆಂದು ಅವರು ವಿನಂತಿಸಿದ್ದಾರೆ.

Related Articles

Back to top button