Latest

ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಶಾಕ್; ಕೋವಿಡ್ ನಿಂದ ಗುಣಮುಖರಾದ ಹಿರಿಯ ನಟ ಇನ್ನಿಲ್ಲ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಆಘಾತಕ್ಕೆ ನಲುಗಿರುವ ಕನ್ನಡ ಚಿತ್ರರಂಗ ಹಿರಿಯ ಕಲಾವಿದರನ್ನು, ನಿರ್ದೇಶಕ, ನಿರ್ಮಾಪಕರು ಸೇರಿದಂತೆ ಹಲವರನ್ನು ಕಳೆದುಕೊಳ್ಳುತ್ತಿದೆ. ಇದೀಗ ಹಿರಿಯ ನಟ, ರಂಗಭೂಮಿ ಕಲಾವಿದ ಬಿ.ಎಂ.ಕೃಷ್ಣೇಗೌಡ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.

ಕಳೆದ 20 ದಿನಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದ ಕೃಷ್ಣೇಗೌಡ ಚಿಕಿತ್ಸೆ ಬಳಿಕ ಗುಣಮುಖರಾಗಿದ್ದರು. ಆದರೆ ಇಂದು ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ ಎಂದು ತಿಳಿದುಬಂದಿದೆ.

Home add -Advt

ಸ್ಯಾಂಡಲ್ ವುಡ್ ನ ಹಲವು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚಿದ್ದ ಕೃಷ್ಣೇಗೌಡ, ಮುಖ್ಯಮಂತ್ರಿ ನಾಟಕದ ಖಾಯಂ ಕಲಾವಿದರಾಗಿದ್ದರು. ಪೋಷಕಪಾತ್ರಗಳ ಅಭಿನಯಕ್ಕಾಗಿಯೇ ರಾಜ್ಯ ಪ್ರಶಸ್ತಿ ಪಡೆದಿದ್ದ ಕೃಷ್ಣೇಗೌಡ ರಾಜ್ಯ ಮಟ್ಟದ ವಾಲಿಬಾಲ್ ಆಟಗಾರರಾಗಿದ್ದರು. ಅಲ್ಲದೇ ಕರ್ನಾಟಕ ರಾಜ್ಯ ಅಕೌಂಟೆಂಟ್ ಜನರಲ್ ಕಚೇರಿಯಲ್ಲಿಯೂ ಕಾರ್ಯನಿರ್ವಹಿಸಿದ್ದರು. ಹಿರಿಯ ನಟನ ನಿಧನಕ್ಕೆ ಸ್ಯಾಂಡಲ್ ವುಡ್ ಹಲವು ಕಲಾವಿದರು ಕಂಬನಿ ಮಿಡಿದಿದ್ದಾರೆ.
ಬ್ಲ್ಯಾಕ್ ಫಂಗಸ್ ಗೆ 25 ಜನ ಬಲಿ

Related Articles

Back to top button