Latest

ಕೊರೋನಾಕ್ಕೆ ಕಷಾಯ ಕುಡಿದು ಮಗ ಸಾವು, ತಂದೆ ಸ್ಥಿತಿ ಗಂಭೀರ

ಪ್ರಗತಿವಾಹಿನಿ ಸುದ್ದಿ, ಶಿರಸಿ – ಕೊರೋನಾ ರೋಗ ಬರಬಾರದೆಂದು ಕಷಾಯ ಕುಡಿದ ಮಗ ಸಾವಿಗೀಡಾಗಿದ್ದು, ತಂದೆಯ ಸ್ಥಿತಿ ಗಂಭೀರವಾಗಿದೆ.

ಶಿರಸಿ ಹೊರವಲಯದ ರಾಮನಬೈಲ್ ನಲ್ಲಿ ಘಟನೆ ನಡೆದಿದೆ. ಫ್ರಾನ್ಸಿಸ್ ರೇಗೋ (42) ಮೃತಪಟ್ಟಿದ್ದು, ನೆಕ್ಲಾಂ ರೇಗೋ (70) ಅವರ ಸ್ಥಿತಿ ಗಂಭೀರವಾಗಿದೆ.

Home add -Advt

ಕೊರೋನಾ ರೋಗ ತಡೆಯುವ ಉದ್ದೇಶದಿಂದ ಇವರಿಬ್ಬರೂ ಕಾಸರಕನ ಮರದ ಚಕ್ಕೆ ಕಷಾಯ ಕುಡಿದಿದ್ದರು ಎನ್ನಲಾಗಿದೆ.

ಘಟನೆ ಕುರಿತು ಇನ್ನೂ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಶಿರಸಿ ಪೊಲೀಸರು ತಿಳಿಸಿದ್ದಾರೆ.

 

 

Related Articles

Back to top button