Kannada NewsKarnataka NewsLatest
*ಮತ್ತೊಂದು ಬೆಂಕಿ ಅನಾಹುತ: ಟೈರ್ ಗೋದಾಮಿಗೆ ಬೆಂಕಿ*

ಪ್ರಗತಿವಾಹಿನಿ ಸುದ್ದಿ: ಟೈರ್ ಗೋದಾಮಿನಲ್ಲಿ ಭಾರಿ ಅಗ್ನಿ ಅನಾಹುತ ಸಂಭವಿಸಿದ್ದು, ಮೂರು ಗೋಡೌನ್ ಗಳು ಸಂಪೂರ್ಣ ಬೆಂಕಿಗಾಹುತಿಯಾಗಿರುವ ಘಟನೆ ಬೆಂಗಳೂರಿನ ಚಾಮರಾಜಪೇಟೆಯ ಗವಿಪುರಂ ಬಳಿ ನಡೆದಿದೆ.
ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಸುಮಾರು ಮೂರು ಗೋದಾಮಿಗೆ ಬೆಂಕಿ ಆವರಿಸಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಮಕ ಸಿಬ್ಬಂದಿ ಬೆಂಕಿ ಆರಿಸಿದ್ದಾರೆ.
ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ. 15 ಸಾವಿರಕ್ಕೂ ಹೆಚ್ಚು ಟೈರ್ ಗಳು ಗೋಡೌನ್ ನಲ್ಲಿತ್ತು. 60 ಸಾವಿರಕ್ಕೂ ಹೆಚ್ಚು ಟ್ಯೂಬ್, ಆಯಿಲ್ ಡಬ್ಬಿಗಳು ಬೆಂಕಿಗಾಹುತಿಯಾಗಿದೆ.
ರಾಜೇಶ್ ಅಗರ್ವಾಲ್ ಎಂಬುವವರಿಗೆ ಸೇರಿದ ಟೈರ್ ಗೋದಾಮು ಇದಾಗಿದೆ ಎಂದು ತಿಳಿದುಬಂದಿದೆ.




