
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕಳೆದ ಮಾರ್ಚ್ 28ರಿಂದ ಏಪ್ರಿಲ್ 11ರವರೆಗೆ ನಡೆದ ಕರ್ನಾಟಕ ಎಸ್.ಎಸ್.ಎಲ್.ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಗಿದಿದ್ದು ಪರೀಕ್ಷಾ ಫಲಿತಾಂಶ ಮೇ 8ರಂದು ಪ್ರಕಟಗೊಳ್ಳುವ ಸಾಧ್ಯತೆಗಳಿವೆ.
KSEAB ಅಧಿಕಾರಿಗಳು karresults.nic.in ಮತ್ತು kseab.karnataka.gov.in. ನಲ್ಲಿ SSLC ಫಲಿತಾಂಶವನ್ನು ಮುಂದಿನ ವಾರ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕೆಎಸ್‌ಇಎಬಿ ಅಧಿಕಾರಿಗಳು ಎಸ್‌ಎಸ್‌ಎಲ್‌ಸಿ ಫಲಿತಾಂಶ ಮೇ 8 ರಂದು ಘೋಷಿಸಲು ಶೇ. 90ರಷ್ಟು ನಿರ್ಧಾರ ಕೈಗೊಂಡಿದ್ದರೂ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಸಭೆ ನಡೆಸುತ್ತಿರುವುದಾಗಿ ಕೆಎಸ್‌ಇಎಬಿ ಕಾರ್ಯದರ್ಶಿ ರೇವಣಸಿದ್ದಪ್ಪ ತಿಳಿಸಿದ್ದಾರೆ. ಬಹುಶಃ ಇಂದು ಇದರ ನಿರ್ಧಾರವಾಗುವ ಸಾಧ್ಯತೆಗಳಿವೆ.
ಫಲಿತಾಂಶ ಘೋಷಣೆ ನಂತರ, SSLC ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ – karresults.nic.in ನಲ್ಲಿ ಪ್ರಕಟಿಸಲಾಗುತ್ತಿದೆ.
ಫಲಿತಾಂಶವನ್ನು ವೆಬ್ ಸೈಟ್ ನಲ್ಲಿ ಪರಿಶೀಲಿಸುವುದು ಹೇಗೆ?
ಕರ್ನಾಟಕ SSLC ಫಲಿತಾಂಶ 2023: ಪರಿಶೀಲಿಸುವುದು ಹೇಗೆ?
- ಅಧಿಕೃತ ವೆಬ್‌ಸೈಟ್-karresults.nic.in ಗೆ ಹೋಗಿ
- ಮುಖಪುಟದಲ್ಲಿ, ಕರ್ನಾಟಕ SSLC 2023 ಫಲಿತಾಂಶ ಲಿಂಕ್ ಕ್ಲಿಕ್ಕಿಸಿ
- ಈಗ ತೆರೆದುಕೊಳ್ಳುವ ಹೊಸ ಲಾಗಿನ್ ಪುಟದಲ್ಲಿ ನಿಮ್ಮ ನೋಂದಣಿ ಸಂಖ್ಯೆ ನಮೂದಿಸಿ ಮತ್ತು ವಿವರಗಳನ್ನು ಸಲ್ಲಿಸಿ
- ಅಲ್ಲಿ ಕಾಣಿಸುವ ಫಲಿತಾಂಶವನ್ನು ಪರಿಶೀಲಿಸಿ ಮತ್ತು ಡೌನ್‌ಲೋಡ್ ಮಾಡಬಹುದು.