Latest

*ಇನ್ಸ್ ಪೆಕ್ಟರ್ ವಿರುದ್ಧ ಸುಳ್ಳು ಆರೋಪ; ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇನ್ಸ್ ಪೆಕ್ಟರ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ರಾಜ್ಯಪಾಲರು, ಪ್ರಧಾನಿಯವರಿಗೆ ಪತ್ರ ಬರೆದಿದ್ದ ಇಬ್ಬರು ಕಾನ್ಸ ಟೇಬಲ್ ಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಬೆಂಗಳೂರಿನ ಸುಬ್ರಹ್ಮಣ್ಯನಗರ ಠಾಣೆ ರೈಟರ್ ಶಿವಕುಮಾರ್ ಹಾಗೂ ಠಾಣೆಯ ಪಿಸಿ ವಿಜಯ್ ರಾಠೋಡ್ ಅಮಾನತುಗೊಂಡವರು. ಸುಬ್ರಹ್ಮಣ್ಯನಗರ ಇನ್ಸ್ ಪೆಕ್ಟರ್ ಶರಣಗೌಡ ವಿರುದ್ಧ ಪಬ್ ಮತ್ತು ಬಾರ್ ನಿಂದ ಮಾಮೂಲಿ ಪಡೆಯುತ್ತಾರೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯಪಾಲರಿಗೂ ಪತ್ರ ಬರೆದಿದ್ದರು.

Home add -Advt

ಇನ್ಸ್ ಪೆಕ್ಟರ್ ವಿರುದ್ಧದ ದೂರಿನ ಹಿನ್ನೆಲೆಯಲ್ಲಿ ಇಲಾಖೆ ತನಿಖೆ ನಡೆಸಿತ್ತು. ಪ್ರಾಥಮಿಕ ತನಿಖೆಯಲ್ಲಿ ಇದಿಒಂದು ಸುಳ್ಳು ಆರೋಪ ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರು ಕಾನ್ಸ್ ಟೇಬಲ್ ಗಳನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.

Related Articles

Back to top button