Kannada NewsLatest
*ಚಲಿಸುತ್ತಿದ್ದ ರೈಲಿನಲ್ಲಿ ಬೆಂಕಿ ದುರಂತ; ಐವರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಢಾಕಾ: ಚಲಿಸುತ್ತಿದ್ದ ರೈಲಿನ ನಾಲ್ಕು ಬೋಗಿಗಳಲ್ಲಿ ಬೆಂಕಿ ದುರಂತ ಸಂಭವಿಸಿದ್ದು, ಐವರು ಸಾವನ್ನಪ್ಪಿರುವ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ.
ಬೆನಾಪೋಲ್ ರೈಲಿನ ನಾಲ್ಕು ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡು ಧಗಧಗನೆ ಉರಿದಿದೆ. ಐವರು ಸಾವನ್ನಪ್ಪಿದ್ದು, ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ರೈಲು ಜೆಸ್ಸೋರ್ ನಿಂದ ಢಾಕಾಗೆ ತೆರಳುತ್ತಿತ್ತು. ರೈಲು ಸಯಿದಾಬಾದ್ ನ ಗೋಲಬಾಗ್ ಪ್ರದೇಶಕ್ಕೆ ತಲುಪಿದಾಗ ಬೆಂಕಿ ಹೊತ್ತಿಕೊಂಡಿದೆ. ಪ್ರಯಾಣಿಕರನ್ನು ರಕ್ಷಿಸುತ್ತಿದ್ದ ವೇಳೆ ಓರ್ವ ಯುವಕ ಬೆಂಕಿಗಾಹುತಿಯಾಗಿದ್ದಾನೆ. ದುರಂತದಲ್ಲಿ ಒಟ್ಟು ಐವರು ಸಾವನ್ನಪ್ಪಿದ್ದಾರೆ.




