Latest

ಎಸಿಬಿ ದಾಳಿ ವೇಳೆ ಕಿಟಕಿಯಿಂದ ಲಂಚದ ಹಣ ಎಸೆದ ಆರ್ ಟಿಒ ಅಧಿಕಾರಿಗಳು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಎಸಿಬಿ ಅಧಿಕಾರಿಗಳು ಆರ್ ಟಿಒ ಕಚೇರಿ ಮೇಲೆ ದಾಳಿ ನಡೆಸಿದ ವೇಳೆ ಆರ್ ಟಿಒ ಸಿಬ್ಬಂದಿಗಳು ಕಿಟಕಿಯ ಮೂಲಕ ಕಂತೆ ಕಂತೆ ಹಣವನ್ನು ಹೊರಗೆ ಎಸೆದಿರುವ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ.

ಕೋರಮಂಗಲ ಆರ್ ಟಿಒ ಕಚೇರಿಯಲ್ಲಿ ವಾಹನ ನೋಂದಣಿ, ಚಾಲನಾ ಪರವಾನಿಗಿ ವಿತರಣೆಯಲ್ಲಿ ಭ್ರಷ್ಟಾಚಾರ ನಡೆಸುತ್ತಿರುವುದಾಗಿ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ಕಚೇರಿ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ದಾಳಿ ಮಾಹಿತಿ ತಿಳಿಯುತ್ತಿದ್ದಂತೆಯೇ ಕಚೇರಿಯ ಕೆಲ ಸಿಬ್ಬಂದಿ ತಮ್ಮ ಬಳಿ ಇದ್ದ ಗರಿ ಗರಿಯಾದ ನೋಟನ್ನು ಕಿಟಕಿಯಿಂದ ಹೊರಕ್ಕೆ ಎಸೆದಿದ್ದಾರೆ.

Home add -Advt

ದಾಳಿ ವೇಳೆ ದಾಖಲೆಗಳ ಕೊಠಡಿ, ಅಧಿಕಾರಿಗಳ ಕೊಠಡಿ, ಕಚೇರಿ ಪಕ್ಕದ ಅಂಗಡಿಗಳಲ್ಲಿ ಲಂಚದ ಹಣವನ್ನು ಬಚ್ಚಿಟ್ಟಿರುವುದು ಪತ್ತೆಯಾಗಿದೆ. ಇದೇ ವೇಳೆ 5.96 ಲಕ್ಷ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Related Articles

Back to top button