Latest

ನಿರ್ಗತಿಕ ಮಹಿಳೆಯರಿಗಾಗಿ ವಸತಿ ನಿಲಯ

ಪ್ರಗತಿವಾಹಿನಿ ಸುದ್ದಿ, ಹಿಡಕಲ್ ಡ್ಯಾಂ (ಬೆಳಗಾವಿ):

ಕೌಟುಂಬಿಕ ದೌರ್ಜನ್ಯ, ಹಿಂಸೆ, ಅನ್ಯಾಯ, ಅತ್ಯಾಚಾರಕ್ಕೆ ಒಳಗಾದ ಬಡ ನಿರ್ಗತಿಕ ಮಹಿಳೆಯರಿಗಾಗಿ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನೆರವಿನಿಂದ ಮಹಿಳಾ ಕಲ್ಯಾಣ ಸಂಸ್ಥೆಯು ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂನಲ್ಲಿ ಆಶ್ರಯ ತಾತ್ಕಾಲಿಕ ಸ್ವಧಾರ ಮಹಿಳಾ ವಸತಿ ಗೃಹವನ್ನು ನಡೆಸುತ್ತಿದೆ.

Home add -Advt

ತೊಂದರೆಗೊಳಗಾದ ಮಹಿಳೆಯರಿಗೆ ಉಚಿತ ಊಟ, ವಸತಿ, ಸ್ವಯಂ ಉದ್ಯೋಗ ತರಬೇತಿ, ಕಾನೂನು ಸಲಹೆ  ಮುಂತಾದ ಸೇವೆಗಳನ್ನು ನೀಡಲಾಗುತ್ತದೆ. 

ಸಮಸ್ಯೆಗೊಳಗಾದ ಮಹಿಳೆಯರು ಗೌರವ ಕಾರ್ಯದರ್ಶಿ ಮಹಿಳಾ ಕಲ್ಯಾಣ ಸಂಸ್ಥೆ, ಭಾರತ ಕಾಲನಿ, ಕಣಬರಗಿ ರಸ್ತೆ, ಬೆಳಗಾವಿ, ದೂರವಾಣಿ ೮೨೧೭೬೮೫೧೧೫ ಅಥವಾ ೯೫೯೦೦೪೪೯೦೫ ಇವರನ್ನು ಸಂಪರ್ಕಿಸಲು ಕೋರಲಾಗಿದೆ.

(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲರಿಗೆ ಶೇರ್ ಮಾಡಿ)

Related Articles

Back to top button