Uncategorized

ತ್ರಿವಳಿ ರೈಲು ಅಪಘಾತ ಪ್ರಕರಣ; IRTS ಅಧಿಕಾರಿ ಅರ್ಚನಾ ಜೋಶಿ ಎತ್ತಂಗಡಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪಶ್ಚಿಮ ಬಂಗಾಳದ ಬಾಲಸೋರ್ ನಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತ ಪ್ರಕರಣದ ನಂತರ ಆಗ್ನೇಯ ರೈಲ್ವೆ ಜನರಲ್ ಮ್ಯಾನೇಜರ್ ಅರ್ಚನಾ ಜೋಶಿ ಅವರನ್ನು ಎತ್ತಂಗಡಿ ಮಾಡಲಾಗಿದೆ.

ಅನಿಲ್ ಕುಮಾರ್ ಮಿಶ್ರಾ ಅವರನ್ನು ಆಗ್ನೇಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾಗಿ ಅಧಿಕಾರ ವಹಿಸಿಕೊಳ್ಳಲು ಸೂಚಿಸಲಾಗಿದೆ. ಅರ್ಚನಾ ಅವರು 2021ರ ಜುಲೈ 30ರಿಂದ ಆಗ್ನೇಯ ರೈಲ್ವೆ ಜನರಲ್ ಮ್ಯಾನೇಜರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು.

ಇನ್ನು ಅರ್ಚನಾ ಜೋಶಿ ಅವರನ್ನು ಬೆಂಗಲೂರಿನ ಯಲಹಂಕದಲ್ಲಿರುವ ರೈಲ್ವೆ ಗಾಲಿ ಹಾಗೂ ಅಚ್ಚು ಕಾರ್ಖಾನೆಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.


Home add -Advt

Related Articles

Back to top button