Latest
ರೆವಿನ್ಯೂ ಇನಸ್ಪೆಕ್ಟರ್ ಕಚೇರಿ ಮೇಲೆ ಎಸಿಬಿ ದಾಳಿ; ಮೂವರ ಬಂಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೈಲಹೊಂಗಲದ ಕಂದಾಯ ಇಲಾಖೆ ನಿರೀಕ್ಷಕರ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ರೆವಿನ್ಯೂ ಇನಸ್ಪೆಕ್ಟರ್ ಸೇರಿ ಮೂವರನ್ನು ಬಂಧಿಸಲಾಗಿದೆ. ಬಂಧಿತರಿಂದ 1.86 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ.

ಕಂದಾಯ ನಿರೀಕ್ಷಕ ಇಬ್ರಾಹಿಂ ಕೊಂಡುಸಾಬ್ ಕೊಂಡುನಾಯ್ಕ್, ಖಾಸಗಿ ವ್ಯಕ್ತಿಗಳಾದ ದಿಲಾವರ ಖಾದರಸಾಬ್ ನದಾಫ್ ಮತ್ತು ದಾದಾಫಿರ್ ಅಲ್ಲಾಭಕ್ಷ ತಹಸಿಲ್ದಾರ ಬಂಧಿತರು.

ಈ ವ್ಯಕ್ತಿಗಳು ಕಂದಾಯ ನಿರೀಕ್ಷಕರ ಕಚೇರಿಯಲ್ಲಿ ಅಕ್ರಮವಾಗಿ ಕೆಲಸ ಮಾಡುತ್ತಿದ್ದು, ಸಾರ್ವಜನಿಕರಿಂದ ಅಕ್ರಮವಾಗಿ ಹಣ ಸಂಗ್ರಹಿಸುತ್ತಿದ್ದರು ಎನ್ನುವ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ. ಮೂವರನ್ನೂ ಬಂಧಿಸಲಾಗಿದ್ದು, 1,86,030 ರೂ. ವಶಪಡಿಸಿಕೊಳ್ಳಲಾಗಿದೆ.




