ಪ್ರಗತಿವಾಹಿನಿ ಸುದ್ದಿ: ತಹಶೀಲ್ದಾರ್ ಕಚೇರಿಯಲ್ಲಿದ್ದ ಎರಡು ಪ್ರಿಂಟರ್ ನ್ನು ಕಳ್ಳನೊಬ್ಬ ಕದ್ದೊಯ್ದಿರುವ ಘಟನೆ ತುಮಕೂರು ತಹಶೀಲ್ದರ ಕಚೇರಿಯಲ್ಲಿ ನಡೆದಿದೆ.
ಸಾರ್ವಜನಿಕರಂತೆ ತಾಲೂಕು ಕಚೇರಿಗೆ ಆಗಮಿಸಿದ ಕಳ್ಳ, ಶಿರಸ್ತೇದಾರ್ ವಿಭಗದಲ್ಲಿದ್ದ ಎರಡು ಪ್ರಿಂಟರ್ ಗಳನ್ನು ಕದ್ದು ಪರಾರಿಯಾಗಿದ್ದಾನೆ. ಕಳ್ಳನ ಕರಾಮತ್ತು ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ.
ಹಾಡಹಗಲೇ ಸಾರ್ವಜನಿಕರಂತೆಯೇ ಕಚೇರಿ ಪ್ರವೇಶಿಸಿದ್ದ ಕಳ್ಳ, ಎರಡು ಪ್ರಿಂಟರ್ ಗಳನ್ನು ಬ್ಯಾಗ್ ನಲ್ಲಿ ತುಂಬಿಕೊಳ್ಳುತ್ತಿರುವ ದೃಶ್ಯ ಸೆರೆಯಾಗಿದೆ. ಖತರ್ನಾಕ್ ಕಳ್ಳ ತಹಶೀಲ್ದಾರ್ ಕಚೇರಿಯಲ್ಲಿ ಪ್ರಿಂತರ್ ಹೊತ್ತೊಯ್ದಿದ್ದು ಕಚ್ರಿ ಸಿಬ್ಬಂದಿಗೆ ಗೊತ್ತಾಗಿಲ್ಲ. ಶಿರಸ್ತೇದಾರ್ ವಿಭಾಗದಲ್ಲಿ ಇದ್ದ ಪ್ರಿಂಟರ್ ಇದ್ದಕ್ಕಿದ್ದಂತೆ ನಾಪತ್ತೆಯಾಗುರುವುದು ಇಂದು ಗೊತ್ತಾಗುತ್ತಿದ್ದಂತೆ ಸಿಸಿಟಿವಿ ಪರಿಶೀಲಿಸಿದಗ ಕಳ್ಳನ ಕೈಚಳಕ ಗೊತ್ತಾಗಿದೆ.
ಗುಬ್ಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ