
ಕೌಶಲ್ಯ ಅಭಿಯಾನ 2019 – ಕೌಶಲ ಹೊಂದಲು ಯುವಜನರಿಗೆ ಸಲಹೆ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಯಮಕನಮರಡಿ : ಸರಕಾರ ಸ್ವಯಂ ಉದ್ಯೋಗಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅವುಗಳ ಸದುಪಯೋಗ ಪಡೆದು ಸತತ ಶ್ರಮ, ಪ್ರಾಮಾಣಿಕತೆ, ವಿನೂತನೆ ಮುಂತಾದ ಗುಣಗಳನ್ನು ಬೆಳಸಿಕೊಂಡು ಆರ್ಥಿಕ ಸ್ವಾವಲಂಬಿಗಳಾಗಬೇಕೆಂದು ತಾಂಜಾನಿಯಾ ಕೌಶಲ ವಿನಿಮಯ ಕಾರ್ಯಕರ್ತ ನೈಸ್ ದಾವೂದಿ ಅಭಿಪ್ರಾಯಪಟ್ಟರು.
ಮಹಿಳಾ ಕಲ್ಯಾಣ ಸಂಸ್ಥೆ, ಬೆಳಗಾವಿ ಮತ್ತು ಎಫ್.ವಿ.ಟಿ.ಆರ್.ಎಸ್ ಬೆಂಗಳೂರು ಅವರುಗಳ ಸಂಯುಕ್ತಾಶ್ರಯದಲ್ಲಿ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ಜಾಗತಿಕ ಯುವ ಕೌಶಲ ದಿನಾಚರಣೆ ಅಂಗವಾಗಿ ಬ್ಯೂಟಿಷಿಯನ್ ಮತ್ತು ಬ್ಯಾಗ ತಯಾರಿಕೆ ತರಬೇತಿಯ ಫಲಾನುಭವಿಗಳಿಗಾಗಿ ಕೌಶಲ್ಯ ಅಭಿಯಾನ 2019 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಸಂಗಾತಿ ಕೌಟುಂಬಿಕ ಸಲಹಾಗಾರರಾದ ಕವಿತಾ ಚೌಗಲಾ ಮಾತನಾಡಿ ಮಹಿಳೆಯರು ಆರ್ಥಿಕವಾಗಿ ಸಬಲರಾಗಿ ಕುಟುಂಬ ನಿರ್ವಹಣೆಯಲ್ಲಿ ಪುರುಷರ ಜೊತೆ ಕೈಜೊಡಿಸಿದಾಗ ಮಾತ್ರ ಕುಟುಂಬದ ಏಳ್ಗೆ ಸಾಧ್ಯ. ಇಚ್ಛಾಶಕ್ತಿ, ಕೆಲಸ ಮಾಡುವ ಮನೋಭಾವನೆ ಬೆಳಸಿಕೊಂಡಲ್ಲಿ ಎಂತಹ ಕಷ್ಟದ ಕೆಲಸಗಳನ್ನು ಮಹಿಳೆ ಮಾಡಬಲ್ಲಳು, ಮಹಿಳೆಯರು ದುಡಿಮೆಯಲ್ಲಿ ತೊಡಗಿದಾಗ ಮಾತ್ರ ಪುರುಷರ ಜೊತೆಯಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ ಭಾಗವಹಿಸಬಲ್ಲಳು ಇದರಿಂದ ಕೌಟುಂಬಿಕ ಸಮಸ್ಯೆಗಳು ಕಡಿಮೆಯಾಗಬಹುದೆಂದರು
ಪ್ರಾಸ್ತಾವಿಕವಾಗಿ ಸ್ಕಿಲ್ ನೆಟ್ ಯೋಜನಾ ನಿರ್ದೇಶಕಿ ಸುರೇಖಾ ಡಿ ಪಾಟೀಲ ಅವರು ಜಾಗತಿಕ ಯುವ ಕೌಶಲ್ಯ ದಿನಾಚರಣೆ ಕುರಿತು ಮಾತನಾಡಿದರು. ವಿ ಅಸೋಸಿಯೇಡ್ಸ್ ಸಿಇಒ ಕು ವೈಷಣವಿ ಹತ್ರೊಟಿ, ಜಿಲ್ಲಾ ಮಹಿಳಾ ಒಕ್ಕೂಟದ ಸದಸ್ಯರಾದ ಅನುರಾಧ ಕಾಪಸಿ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಂಯೋಜಕರಾದ ಎಂ. ಎಂ ಗಡಗಲಿ, ತರಬೇತಿದಾರರಾದ ರೇಶ್ಮಾ ಖಲೀಫ್, ದೇವತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂತೋಷ ಬಡಿಗೇರ ನಿರೂಪಿಸಿ ವಂದಿಸಿದರು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ