Latest

ವಾಹನ ಚಾಲನೆ ವೇಳೆ ಇನ್ಮೇಲೆ ಫೋನ್ ನಲ್ಲಿ ಮಾತಾಡಬಹುದು!

ಶೀಘ್ರದಲ್ಲೇ ಕಾನೂನು ತಿದ್ದುಪಡಿ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಡ್ರೈವಿಂಗ್ ಮಾಡುವಾಗ ಇಯರ್ ಫೋನ್ ಹಾಕಿ ಮಾತನಾಡುವುದು ಅಪರಾಧವಲ್ಲ ಎಂಬ ಸುಳಿವನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಕೊಟ್ಟಿದ್ದಾರೆ.

ಈ ಕುರಿತು ಲೋಕಸಭೆಯಲ್ಲಿ ಮಾತನಾಡಿದ ಅವರು, ಚಾಲಕ ಕೈ ಬಳಕೆ ಮಾಡದೇ ಮೊಬೈಲ್ ನಲ್ಲಿ ಮಾತನಾಡುತ್ತಿದ್ದರೆ ಅದನ್ನು ಅಪರಾಧ ಎಂದು ಪರಿಗಣಿಸಲ್ಲ. ಅಂತಹ ಪ್ರಕರಣದಲ್ಲಿ ಸಂಚಾರಿ ಪೊಲೀಸರು ದಂಡವನ್ನು ವಿಧಿಸುವಂತಿಲ್ಲ. ಒಂದು ವೇಳೆ ದಂಡ ವಿಧಿಸಿದರೆ ಅದನ್ನು ಚಾಲಕ ಕೋರ್ಟ್ ನಲ್ಲಿ ಪ್ರಶ್ನಿಸಲು ಅವಕಾಶವಿದೆ ಎಂದು ತಿಳಿಸಿದ್ದಾರೆ.

ಶೀಘ್ರವಾಗಿ ಈ ನಿಟ್ಟಿನಲ್ಲಿ ಅಗತ್ಯ ತಿದ್ದುಪಡಿಯನ್ನು ಮೋಟಾರು ವಾಹನ ಕಾಯಿದೆಗೆ ತರಲಾಗುವುದು ಎಂದು ಹೇಳಿದರು. ಸರ್ಕಾರ ಅಥವಾ ಕಾನೂನಿನ ಮೂಲ ಉದ್ದೇಶವಿರುವುದು ಚಾಲಕರು ಅಪಘಾತ ಮಾಡಬಾರದು ಹಾಗೂ ಅಪಘಾತಕ್ಕೆ ತುತ್ತಾಗಬಾರದು ಎಂಬುದು. ಹೀಗಾಗಿ ಇಯರ್ ಫೋನ್ ಮೂಲಕ ಫೋನ್ ಸಂಭಾಷಣೆಗೆ ಅನುವು ಮಾಡಿಕೊಡಲಾಗುತ್ತದೆ. ಈ ಸಂಬಂಧ ಅಧಿಕಾರಿಗಳು ಸಚಿವಾಲಯದಲ್ಲಿ ಸೂಕ್ತ ಕಾನೂನು ಸಿದ್ಧಪಡಿಸುತ್ತಿದ್ದಾರೆ ಎಂದು ವಿವರಿಸಿದರು.

ಮೊಬೈಲ್ ನಲ್ಲಿ ಮಾತನಾಡುತ್ತ ವಾಹನ ಚಾಲನೆಗೆ ಅವಕಾಶವೆಂದರೆ ನೇರವಾಗಿ ಫೋನ್ ಕಿವಿಗಿಟ್ಟು ಮಾತನಾಡುವಂತಿಲ್ಲ. ಮೊಬೈಲ್ ಅಥವಾ ಸ್ಮಾರ್ಟ್ ಫೋನ್ ಗಳು ಚಾಲಕರ ಜೇಬಿನಲ್ಲಿರಬೇಕು. ಇಯರ್ ಫೋನ್ ಅಥವಾ ಹ್ಯಾಂಡ್ ಫ್ರೀ ಸಾಧನಗಳನ್ನು ಬಳಸಿ ಮೊಬೈಲ್ ಸಂಪರ್ಕ ಸಾಧಿಸುವುದಕ್ಕೆ ಮಾತ್ರ ಅವಕಾಶ ನೀಡಲಾಗುವುದು. ರಸ್ತೆ ಸಂಚಾರದಲ್ಲಿ ಅಶಿಸ್ತು, ಅಪಘಾತಕ್ಕೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದ ಜನತೆಗೆ ಶೀಘ್ರ ಕರೆಂಟ್ ಶಾಕ್…!

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button