ಪ್ರಗತಿವಾಹಿನಿ ಸುದ್ದಿ; ಚೆನ್ನೈ: ದೇವಸ್ಥಾನದಲ್ಲಿ ನಡೆದ ಉತ್ಸವದ ವೇಳೆ ಕ್ರೇನ್ ಕುಸಿದು ಬಿದ್ದು ನಾಲ್ವರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ರಾಣಿಪೇಟ್ ಜಿಲ್ಲೆಯ ಕಿಲಿವೀಡಿ ಮಂಡಿಯಮ್ಮನ ದೇವಸ್ಥಾನ ಮೈಲಾರ ಉತ್ಸವದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಜ್ಯೋತಿಬಾಬು (17) ಎಸ್.ಭೂಪಾಲನ್ (40) ಕೆ.ಮುತ್ತುಕುಮಾರ್ (39) ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಯುವತಿ ಸೇರಿ 9 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಪುನ್ನೈ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಘಡದ ವೇಳೆ ಎಂಟು ಜನರು ಕ್ರೇನ್ ಮೇಲೆ ನೇತಾಡುತ್ತಿದ್ದರು ಎನ್ನಲಾಗಿದೆ. ಕ್ರೇನ್ ಬೀಳುತ್ತಿದ್ದ ಭಯಂಕರ ದೃಶ್ಯ ಹಾಗೂ ಜನರು ಭಯಭೀತರಾಗಿ ಕೋಗಾಡುತ್ತಿದ್ದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಪೊಂಗಲ್ಪ್ರತಿಯ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಉತ್ಸವದ ಸಮಯದಲ್ಲಿ ಭಕ್ತರು ದೇವರಿಗೆ ತಮ್ಮ ಭಕ್ತಿ ಸಮರ್ತ್ಪಿಸಲು ಕ್ರೇನ್ ನಲ್ಲಿ ನೇತಾಡುತ್ತಾರೆ ಹಾಗೂ ದೇವರಿಗೆ ಹಾರ ಹಾಕುತ್ತಾರೆ. ಈ ವೇಳೆ ಕೇನ್ ಕುಸಿದು ದುರಂತ ಸಂಭವಿಸಿದೆ ಎನ್ನಲಾಗಿದೆ.
*ಟ್ರಕ್-ಕಾರು ಭೀಕರ ಅಪಘಾತ; 6 ಜನರ ದುರ್ಮರಣ*
https://pragati.taskdun.com/trukcaraccident6-people-deathuttara-pradesh/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ