ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯದ ಕಸರತ್ತುಗಳು, ವಾಕ್ ವರಸೆಗಳು ಮಿತಿ ಮೀರುತ್ತಿವೆ. ಏತನ್ಮಧ್ಯೆ ಬಿಜೆಪಿಯ ಕೆಲ ಮುಖಂಡರ ನಡೆ, ನುಡಿಗಳು ಶಿಸ್ತು, ಸಿದ್ಧಾಂತದ ಪಕ್ಷ ಎಂದು ಹೇಳಿಕೊಳ್ಳುವ ಸ್ವಪಕ್ಷದ ಸಿದ್ಧಾಂತದ ಬುಡಕ್ಕೇ ಕೊಡಲಿ ಇಡುವಂತಿವೆ.
ಇಂದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿಯವರ ಪುತ್ರರ ವಿವಾಹ ಸಮಾರಂಭಕ್ಕೆ ಆಗಮಿಸುತ್ತಿದ್ದು ಅವರು ಈ ಎರಡು ಪ್ರಶ್ನೆಗಳಿಗೆ ಉತ್ತರಿಸುವರೇ?
ಮೊನ್ನೆಯಷ್ಟೇ ಕಾರ್ಯಕ್ರಮವೊಂದರಲ್ಲಿ ಶಾಸಕ ರಮೇಶ ಜಾರಕಿಹೊಳಿಯವರು ಭಾಷಣ ಮಾಡುತ್ತ, “ನಾವು ಆರು ಸಾವಿರ ರೂ. ಗಿಫ್ಟ್ ಕೊಟ್ಟರೆ ಮಾತ್ರ ನಮಗೆ ಮತ ಹಾಕಿ” ಎಂದು ಹೇಳಿದ್ದಾರೆ. ಇಷ್ಟೇ ಅಲ್ಲದೆ ಚುನಾವಣೆಯಲ್ಲಿ ವಿರೋಧಿಗಳಿಗಿಂತ 10 ಕೋಟಿ ಹೆಚ್ಚು ಖರ್ಚು ಮಾಡುವುದಾಗಿ ಹೇಳಿದ್ದಾರೆ.
ರಮೇಶ ಜಾರಕಿಹೊಳಿ ಅವರಿಗೆ ಬಿಜೆಪಿಯ ಶಿಸ್ತು, ಸಿದ್ಧಾಂತಗಳು ಅನ್ವಯಿಸುವುದಿಲ್ಲವೇ? ಅಥವಾ ಅವರ ಈ ಮಾತುಗಳ ಬಗ್ಗೆ ಸಿಎಂ ಏನೆನ್ನುತ್ತಾರೆ?
ಇದೇ ವಿಚಾರವಾಗಿ ನಿನ್ನೆಯಷ್ಟೇ ಬೆಳಗಾವಿ ಜಿಲ್ಲಾ ಉಸ್ತುವಾರಿ ಮತ್ತು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ಈ ವಿಷಯದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ “ಯಾರೋ ಒಬ್ಬ ವ್ಯಕ್ತಿ ಏನಾದರೂ ಹೇಳಿಕೆ ನೀಡಿದರೆ ಅದು ಪಕ್ಷಕ್ಕೆ ಸಂಬಂಧವಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.
ಆದರೆ ಇವೆಲ್ಲವೂ ಜನಮಾನಸದಲ್ಲಿ, ಪಕ್ಷದ ಕಾರ್ಯಕರ್ತರ ವಲಯದಲ್ಲೂ ಗೋಜಲು ಹುಟ್ಟಿಸಿವೆ. ಇಂದು ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಿರುವುದಕ್ಕೆ ರಮೇಶ ಜಾರಕಿಹೊಳಿ ಕಾರಣೀಭೂತರು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಆದರೆ ಪಕ್ಷ ಅಧಿಕಾರಕ್ಕೆ ತಂದ ಮುಖಂಡರೊಬ್ಬರನ್ನು “ಯಾರೋ ಒಬ್ಬ ವ್ಯಕ್ತಿ” ಎಂದು ಸಂಬೋಧಿಸುವುದು ಎಷ್ಟರ ಮಟ್ಟಿಗೆ ಸರಿ?
ಹಾಗಿದ್ದಲ್ಲಿ ಪಕ್ಷದಲ್ಲಿ ರಮೇಶ ಜಾರಕಿಹೊಳಿ ಅವರ ಸ್ಥಾನಮಾನ “ಯಾರೋ ಒಬ್ಬ ವ್ಯಕ್ತಿ”ಯದಾ? ಇದಕ್ಕೆ ಸಿಎಂ ಏನೆನ್ನುತ್ತಾರೆ?
ಒಂದೆಡೆ ಜನತೆಯೂ ಈ ಬಗ್ಗೆ ತೀವ್ರ ಕುತೂಹಲದಲ್ಲಿದ್ದು ಸಿಎಂ ಪ್ರತಿಕ್ರಿಯೆಗೆ ಎದುರು ನೋಡುತ್ತಿದ್ದಾರೆ.
ರಮೇಶ ಜಾರಕಿಹೊಳಿಗೆ `ಯಾರೋ ಒಬ್ಬ ವ್ಯಕ್ತಿ’ ಎಂದ ಗೋವಿಂದ ಕಾರಜೋಳ!
https://pragati.taskdun.com/govinda-karajolas-response-to-ramesh-jarakiholis-statement/
*ಮೈಲಾರ ಉತ್ಸವದಲ್ಲಿ ಕುಸಿದುಬಿದ್ದ ಕ್ರೇನ್; ನಾಲ್ವರ ದುರ್ಮರಣ*
https://pragati.taskdun.com/tamilanducrane-collapsetemple4-people-death/
ರಾಮದುರ್ಗ: 27 ಕುರಿಗಳ ನಿಗೂಢ ಸಾವು
https://pragati.taskdun.com/rajahansagad-development-work-in-final-phase/
*ಟ್ರಕ್-ಕಾರು ಭೀಕರ ಅಪಘಾತ; 6 ಜನರ ದುರ್ಮರಣ*
https://pragati.taskdun.com/trukcaraccident6-people-deathuttara-pradesh/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ