Kannada NewsKarnataka NewsLatest

ರಾಮದುರ್ಗ: 27 ಕುರಿಗಳ ನಿಗೂಢ ಸಾವು

ಪ್ರಗತಿವಾಹಿನಿ ಸುದ್ದಿ, ರಾಮದುರ್ಗ: ಮನಿಹಾಳ ಗ್ರಾಮದಿಂದ ರಾಮದುರ್ಗದತ್ತ ಬರುತ್ತಿದ್ದ ಹಿಂಡಿನಲ್ಲಿದ್ದ 27 ಕುರಿಗಳು ನಿಗೂಢ ಸಾವನ್ನಪ್ಪಿವೆ.

ಹಿಂಡಿನಲ್ಲಿ ಒಟ್ಟು 100 ಕುರಿಗಳಿದ್ದವು. ಇವು ಚಿಲಮೂರಿನ ವಿಠ್ಠಲ ಲಕ್ಕಪ್ಪ ಸನದಿ ಎಂಬುವವರಿಗೆ ಸೇರಿದ್ದು ಮನಿಹಾಳ ಗ್ರಾಮದ ಶೇಖರಯ್ಯ ಬೂದಿಹಾಳ ಫಾರ್ಮ್ ನಲ್ಲಿ ತಂಗಿದ್ದ ವೇಳೆ 27 ಕುರಿಗಳು ಸಾಮೂಹಿಕವಾಗಿ ಸಾವು ಕಂಡಿವೆ.

ಸಾವಿಗೆ ಕಾರಣಗಳು ತಿಳಿದುಬಂದಿಲ್ಲ. ನಿಗೂಢ ಕಾಯಿಲೆಗೇನಾದರೂ ಬಲಿಯಾಗಿವೆಯೇ ಅಥವಾ ವಿಷಯುಕ್ತ ವಸ್ತುಗಳ ಸೇವನೆಯಾಗಿದೆಯೆ ಎಂಬ ಬಗ್ಗೆ ಎಲ್ಲ ಆಯಾಮಗಳಲ್ಲಿ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

*ಹಿರಿಯ ನಟ ಲಕ್ಷ್ಮಣ ಇನ್ನಿಲ್ಲ*

https://pragati.taskdun.com/sandalwoodactorlakshmanadeath/

*ಬೆಂಗಳೂರಿನಲ್ಲಿ ಪಾಕಿಸ್ತಾನ ಯುವತಿ ಬಂಧನ*

https://pragati.taskdun.com/19-years-old-pakistani-girlarrestedbangalore/

ಲಕ್ಷಾಂತರ ರೂ. ಬೆಲೆಯ ಟಯರ್ ಕಳ್ಳನ ಬಂಧನ

https://pragati.taskdun.com/vehicle-tire-thiefe-arrested/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button