Kannada NewsKarnataka News

ಶಿಕ್ಷಕ ಪತಿ ಹೊಲದಲ್ಲಿ, ಗೃಹಿಣಿ ಪತ್ನಿ ಮನೆಯಲ್ಲಿ ಆತ್ಮಹತ್ಯೆ

ಪ್ರಗತಿವಾಹಿನಿ ಸುದ್ದಿ, ಬೈಲಹೊಂಗಲ – ಶಿಕ್ಷಕನಾಗಿದ್ದ ಪತಿ ಹೊಲವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡರೆ, ಗೃಹಿಣಿಯಾಗಿದ್ದ ಪತ್ನಿ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಬ್ಬರು ಕಂದಮ್ಮಗಳು ಮಾತ್ರ ಅನಾಥರಾಗಿದ್ದಾರೆ.

ಇಲ್ಲಿಯ ಚನ್ನಮ್ಮ ನಗರದ ಮೊದಲ ಕ್ರಾಸ್ ನಲ್ಲಿ ಘಟನೆ ನಡೆದಿದೆ. ಚಿಕ್ಕಮುನವಳ್ಳಿಯವರಾದ ಗುರುನಾಥ ತಾವರೆ ಅಮಟೂರು ಶಾಲೆಯಲ್ಲಿ ಶಿಕ್ಷಕರಾಗಿದ್ದರು. 13 ವರ್ಷದ ಹಿಂದೆ ಬೆಲಗಾವಿಯ ಮೀನಾಕ್ಷಿ ಎನ್ನುವವರ ಜೊತೆ ವಿವಾಹವಾಗಿತ್ತು. ಇವರಿಗೆ 10 ವರ್ಷ ಮತ್ತು 6 ವರ್ಷದ ಮಕ್ಕಳಿದ್ದಾರೆ.

Home add -Advt

ಪತಿ ಪತ್ನಿ ಮಧ್ಯ ಆಗಾಗ ಜಗಳವಾಗುತ್ತಿತ್ತು, ಇದು ನ್ಯಾಯಾಲಯದ ಮೆಟ್ಟಿಲು ಸಹ ಏರಿತ್ತು. ಸೋಮವಾರ ರಾತ್ರಿಯೂ ಜಗಳ ವಿಕೋಪಕ್ಕೆ ಹೋಗಿದ್ದು, ಪತಿ ಮನೆಯಿಂದ ಬಂದು ಹತ್ತಿರದ ಹೊಲವೊಂದರಲ್ಲಿ ಕ್ರಿಮಿ ನಾಶಕ ಸೇವಿಸಿದ್ದಾರೆ. ಪತ್ನಿ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ.

ಬೈಲಹೊಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button