Cancer Hospital 2
Beereshwara 36
LaxmiTai 5

ಶಿಕ್ಷಕರಿಗಾಗಿ ಭೋಜನ ತಯಾರಿಸಿ ಉಣಬಡಿಸಿದ ವಿದ್ಯಾರ್ಥಿಗಳು

ಹುಕ್ಕೇರಿ ಹಿರೇಮಠದಲ್ಲಿ ಶಿಕ್ಷಕರ ದಿನಾಚರಣೆ

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ; ಹುಕ್ಕೇರಿ: ಶಿಕ್ಷಕರು ದೇಶದ ರಕ್ಷಕರು ಶಿಸ್ತಿನಿಂದ ಶಿಕ್ಷಣ ನೀಡುವವರು ಎಂಬ ಹುಕ್ಕೇರಿಶ್ರೀ ಕವನ ಇವತ್ತು ನಮಗೆಲ್ಲ ಸ್ಪೂರ್ತಿ ಶಿಕ್ಷಕರೇ ದೇಶದ ರಕ್ಷಕರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಇಂದು ನಗರದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ಸಂಸ್ಥೆಯಲ್ಲಿ ಮಕ್ಕಳೇ ಶಿಕ್ಷಕರ ದಿನಾಚರಣೆಯನ್ನು ಆಚರಿಸಬೇಕು ಎಂದು ಎಲ್ಲಾ ಶಿಕ್ಷಕರನ್ನು ಗೌರವಿಸಿ ಮಕ್ಕಳಿಂದ ಗೌರವ ಸಮರ್ಪಿಸುವುದರ ಜೊತೆಗೆ ಮಕ್ಕಳೇ ಶಿಕ್ಷಕರಿಗೆ ಭೋಜನವನ್ನು ತಮ್ಮ ಕೈಯಾರೆ ಮಾಡಿ ಗುರುವಿನ ಋಣವನ್ನು ತೀರಿಸುವ ಕೆಲಸವನ್ನು ಮಾಡಿದ್ದಾರೆ.

ಈ ಕಾರ್ಯ ಎಲ್ಲರಿಗೂ ಮಾದರಿ ಎಂದು ಚಿಕ್ಕೋಡಿ ಜಿಲ್ಲಾ ಅಕ್ಷರ ದಾಸೋಹ ಯೋಜನೆಯ ಶಿಕ್ಷಣಾಧಿಕಾರಿಗಳಾದ ರಾಜೇಂದ್ರ ತೇರದಾಳ್ ಅವರು ನಗರದ ಶ್ರೀ ಗುರು ಶಾಂತೇಶ್ವರ ಜನಕಲ್ಯಾಣ ಪ್ರತಿಷ್ಠಾನದ ಅಡಿಯಲ್ಲಿ ನಡೆಯುತ್ತಿರುವ ಪ್ರಾಥಮಿಕ ಪ್ರೌಢ ಶಾಲೆಯ ಶಿಕ್ಷಕ ದಿನಾಚರಣೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Emergency Service

ಇದೇ ಸಂದರ್ಭದಲ್ಲಿ ಸಾನಿಧ್ಯವನ್ನು ವಹಿಸಿಕೊಂಡು ಮಾತನಾಡಿದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಶಿಕ್ಷಕರೂ ಇರಲಿಲ್ಲ ಎಂದರೆ ಯಾರು ಉನ್ನತಿಯನ್ನು ಸಾಧಿಸಲು ಆಗದು ಇವತ್ತು ವೈದ್ಯಕೀಯ ರಾಜಕೀಯ ಅಷ್ಟೇ ಏಕೆ ಎಲ್ಲ ರಂಗದಲ್ಲಿಯೂ ಕೂಡ ಯಾರಾದರೂ ಬೆಳೆದು ನಿಂತಿದ್ದಾರೆ ಎಂದರೆ ಅದರ ಹಿಂದೆ ಶಿಕ್ಷಕರೇ ಇದ್ದಾರೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಎಸ್ ಬಿ ಜಿನರಾಳಿ ,ಸಂಪತ್ ಕುಮಾರ್ ಶಾಸ್ತ್ರಿಗಳು, ಎಸ್ ಡಿ ಚೌಗಲಾ, ಆರ್ ಸಿ ಬಾಗೆವಾಡಿ, ಎಸ್ ಸಿ ಹಿರೇಮಠ, ಎಸ್ ಎಸ್ ಬೋಗೋಣಿ, ಎಸ್ ಎಂ ಸಿರಸಂಗಿಮಠ, ಉದಯ ಕೋರಿಮಠ ,ಎಸ ಎ ಪಾಟಿಲ್, ಬಿ ಕೆ ಕಮತೆ, ಬಿ ಎನ್ ಮಗುದುಮ್ಮ, ಚೌಗಲಾ, ಎಸ್ ಐ ಪಾಟಿಲ್, ಎಸ್ ಎನ್ ಮಗದುಮ್ಮ , ವಿ ಬಿ ಹಾಲಭಾವಿ , ಎಮ್ ಸಿ ಬಾಗೇವಾಡಿ, ಎಲ್ ಎಮ್ ಹಿರೆಕೋಡಿ ,ಎ ಡಿ ಖಾನಾಪುರೆ ಶಿಕ್ಷಕ ಶಿಕ್ಷಕಿಯರನ್ನ ಸಂಸ್ಥೆಯಿಂದ ವಿಶೇಷವಾಗಿ ಗೌರವಿಸಲಾಯಿತು.

ಮುರುಘಾಶ್ರೀಗಳ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ; 2ನೇ ಆರೋಪಿ ಕಸ್ಟಡಿಗೆ ನೀಡುವಂತೆ ಪೊಲೀಸರ ಮನವಿ

https://pragati.taskdun.com/latest/murughashreebail-hearingjudicial-custody-2/

Bottom Add3
Bottom Ad 2