
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಶಿಕ್ಷಕರ ವರ್ಗಾವಣೆ ನೂನ್ಯೂತೆ ಸರಿಪಡಿಸುವುದು, ಪದೋನ್ನತಿ ನೀಡುವುದು, ಸಿಅಂಡ್ ಆರ್ ನಿಯಮ ತಿದ್ದುಪಡಿ, ಎನ್.ಪಿ.ಎಸ್ ಯೋಜನೆ ರದ್ಧತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರಾಥಮಿಕ ಶಾಲಾ ಶಿಕ್ಷಕರು ಬೆಳಗಾವಿಯಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿದರು.
ಪ್ರೌಢ ಶಾಲಾ ಶಿಕ್ಷಕರು, ಟಿಜಿಟಿ ಶಿಕ್ಷಕರು ಸಹ ಪ್ರತಿಭಟನೆಗೆ ಬೆಂಬಲ ನೀಡಿದ್ದರು. ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಶಿಕ್ಷಕರು ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ ನಂತರ ಪ್ರತಿಭಟನಾ ಸಭಯನ್ನೂ ನಡೆಸಿದರು. ಶಿಕ್ಷಕರ ಪ್ರತಿಭಟನೆಯಿಂದಾಗಿ ಸಂಚಾರ ವ್ಯವಸ್ಥೆಗೆ ಸ್ವಲ್ಪ ಹೊತ್ತು ಅಡ್ಡಿಯುಂಟಾಗಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ