*ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಬಹುಮತ ಅಂತರದಿಂದ ಗೆಲ್ಲಿಸಿ: ಡಾ. ತೇಜಸ್ವಿನಿ ಗೌಡ*
ಪ್ರಗತಿವಾಹಿನಿ ಸುದ್ದಿ: “ಜಾತಿ ರಾಜಕಾರಣ ಮಾಡುವುದರಲ್ಲಿ ಬಿಜೆಪಿಯವರು ಮಗ್ನರಾಗಿದ್ದಾರೆ. ಇದರಿಂದ ದೇಶದ ಆರ್ಥಿಕ ವ್ಯವಸ್ಥೆಗೆ ತೀವ್ರ ಹೊಡೆತ ಬೀಳುತ್ತಿದೆ. ದೇಶದ ಪ್ರಗತಿಗೆ, ಅಭಿವೃದ್ಧಿಗೆ ಆದ್ಯತೆ ನೀಡುವ ಕಾಂಗ್ರೆಸ್ ಗೆ ಮತದಾರರು ಆಶೀರ್ವಾದ ಮಾಡಿ, ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಬಹುಮತ ಅಂತರದಿಂದ ಗೆಲ್ಲಿಸಿ” ಎಂದು ಕೆಪಿಸಿಸಿ ವಕ್ತಾರೆ ಡಾ. ತೇಜಸ್ವಿನಿ ಗೌಡ ಮನವಿ ಮಾಡಿಕೊಂಡರು.
ಚಿಕ್ಕೋಡಿ ತಾಲೂಕಿನ ಕಬ್ಬೂರ ಪಟ್ಟಣ ಪಂಚಾಯತ್ ನಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರ ಪರ ಮತಯಾಚಿಸಿ ಅವರು ಮಾತನಾಡಿದರು.
ಚಿಕ್ಕೋಡಿ ಭಾಗದಲ್ಲಿ ಯುವನಾಯಕಿಗೆ ಇಷ್ಟೊಂದು ಅಪಾರ ಬೆಂಬಲ ನೋಡಿ ತುಂಬಾ ಖುಷಿಯಾಗಿದೆ. ಮತದಾರರು ಇನ್ನೂ ಹೆಚ್ಚಿನ ಮಟ್ಟದಲ್ಲಿ ಪ್ರಿಯಾಂಕಾ ಗೆಲುವಿಗೆ ಶಕ್ತಿ ತುಂಬಿ.
ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಚುನಾವಣೆಗೆ ಸಿಲ್ಲಿಸಿರೋದೆ ಗೆಲ್ಲಿಸೋದಕ್ಕಾಗಿ, ಆ ಗೆಲುವು ಬಹುಮತ ಅಂತರ ಗೆಲುವು ಆಗಿರಬೇಕು ಎಂದು ಹೇಳಿದರು.
ಕೇಂದ್ರಕ್ಕೆ 18 ಸಾವಿರ ಕೋಟಿ ರೂ. ಕೇಳಿದರೆ, ಕೇಂದ್ರ ಸರ್ಕಾರದ 3500 ಕೋಟಿ ಅನುದಾನ ನೀಡಿದೆ. ಇವನ್ನೆಲ್ಲ ಪ್ರಶ್ನೆ ಮಾಡಬೇಕಾದರೆ ಅಣ್ಣಾಸಾಬ್ ಜೊಲ್ಲೆ ಅವರಂತವರನ್ನು ಆಯ್ಕೆಮಾಡಿದರೆ ಪ್ರಯೋಜವಿಲ್ಲ. ನಿಮ್ಮ ಪರ ಧ್ವನಿ ಎತ್ತುವ, ಹಗಲಿರುಳು ದುಡಿಯುವ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಗೆಲ್ಲಿಸಿ ಎಂದು ತಿಳಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಕಾಂಗ್ರೆಸ್ ಪಕ್ಷವನ್ನೆ ಬೆಂಬಲಿಸಿ. ಸ್ವಾತಂತ್ರ್ಯ ಪೂರ್ವದಿಂದಲೂ ಕಾಂಗ್ರೆಸ್ ಪಕ್ಷ ದೇಶಕ್ಕೆ ಅಪಾರ ಕೊಡುಗೆ ನೀಡಿದೆ. ಕ್ಷೇತ್ರ ದ ಅಭಿವೃದ್ದಿ ಜತೆಗೆ ನಿಮ್ಮ ಕುಂದು ಕೊರತೆಗಳನ್ನು ನಿವಾರಿಸಲು ನಾನು ಪ್ರಾಮಾಣಿಕವಾಗಿ ಮಾಡಲಾಗುವುದು ಎಂದರು.
ಕೇಂದ್ರದಲ್ಲೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ 25 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗುವುದು. ಮಹಿಳೆಯರಿಗೆ 1 ಲಕ್ಷ ರೂ. ಮನೆಗೆ ಬರುವುದು, ಮತಪ್ರಭು ಯೋಚನೆ ಮಾಡಿ, ನಿಮ್ಮ ಹಕ್ಕನ್ನು ಚಲಾಯಿಸಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿರುವ ನಿಮ್ಮ ಮನೆ ಮಗಳನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ಅರ್ಜುನ ನಾಯಕವಾಡಿ ಮಾತನಾಡಿ, ಮೇ. 7 ತಾರೀಖು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಹೆಚ್ಚಿನ ಮತ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಪಂ ಮೀಲನ ಪಾಟೀಲ್, ಕೆಪಿಸಿಸಿ ಕಾರ್ಯದರ್ಶಿ ಮಹಾವೀರ ಮೋಹಿತೆ, ಅರ್ಜುನ ನಾಯಕವಾಡಿ, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ನಿರ್ಮಲಾ ಪಾಟೀಲ್ ಸೇರಿದಂತೆ ಹಲವರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ