
ಪ್ರಗತಿವಾಹಿನಿ ಸುದ್ದಿ: ಆರೋಗ್ಯ ಇಲಾಖೆಯು ತಿಳಿಸಿರುವ ಮಾಹಿತಿಯ ಪ್ರಕಾರ ಎಲ್ಲಾ ವಿದ್ಯಾರ್ಥಿಗಳು ಹಾಗೂ ಪೋಷಕರು ಯಾವುದೇ ರೀತಿಯ ಫ್ರಿಜ್ ನೀರು,ಐಸ್ ಕ್ರೀಮ್ ಮತ್ತು ತಂಪು ಪಾನೀಯಗಳನ್ನು ಕುಡಿಯಬಾರದು. ಏಕೆಂದರೆ ಕೋವಿಡ್ ಸಮಯದಲ್ಲಿ ಕೋವಿ ಶೀಲ್ಡ್ ಹಾಕಿಸಿಕೊಂಡಿರುವ ಪರಿಣಾಮ ರಕ್ತ ಹೆಪ್ಪುಗಟ್ಟುವುದು ದಿಢೀರ್ ಹೃದಯಾಘಾತ ಸಂಭವಿಸಿ ಪ್ರಾಣಹಾನಿಯಾಗುತ್ತಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಶ್ರೀ ಸಿದ್ದರಾಮಯ್ಯ ಲಾ ಕಾಲೇಜ್ ಪ್ರಕಟಣೆ ಹೊರಡಿಸಿದೆ.
ಈ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವುದು. ಹಾಗೂ ತಮ್ಮ ಪೋಷಕರಿಗೆ ಮತ್ತು ಇತರರಿಗೆ ಪಾಲಿಸಲು ಹೇಳಬೇಕು. ಇನ್ನೂ ಎರಡು ತಿಂಗಳು ಬೇಸಿಗೆ ಹೆಚ್ಚಾಗುತ್ತಿರುವ ಕಾರಣದಿಂದ ಬಿಸಿಲು ಹೆಚ್ಚಾಗಿ (ಸನ್ ಸ್ಟೋಕ್) ಸೂರ್ಯಾಘಾತ ಸಂಭವಿಸುತ್ತಿದೆ. ಆದ್ದರಿಂದ ಎಲ್ಲರೂ ತಲೆಯ ಮೇಲೆ ಟೋಪಿ ಅಥವಾ ಬಟ್ಟೆ ಅಥವಾ ಛತ್ರಿ ಹಿಡಿದು ಓಡಾಡಬೇಕೆಂದು ಸೂಚಿಸಲಾಗಿದೆ.
ಈ ವಿಷಯವನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಪಾಲಿಸುತ್ತ ತಮ್ಮ ಪೋಷಕರಿಗೆ ಮತ್ತು ಇತರರಿಗೆ ತಿಳಿಸಬೇಕೆಂದು ಪ್ರಕಟಣೆಯಲ್ಲಿ ಕೋರಿದೆ.




