ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೇವಾಲಯ ತೆರವು ವಿವಾದ ತೀವ್ರ ಸ್ವರೂಪ ಪಡೆದ ಬೆನ್ನಲ್ಲೇ ಎಚ್ಚತ್ತ ರಾಜ್ಯ ಸರ್ಕಾರ ದೇವಾಲಯಗಳ ರಕ್ಷಣೆಗೆ ಹೊಸ ಮಸೂದೆ ಮಂಡನೆ ಮಾಡಿದೆ. ಇದೇ ವೇಳೆ ದೇಗುಲಗಳನ್ನು ಉಳಿಸಲು ಅಯೋಧ್ಯೆ ಮಾದರಿಯ ಯೋಜನೆ ಜಾರಿಗೆ ಚಿಂತನೆ ನಡೆಸಿದೆ.
ಸುಪ್ರೀಂ ಕೋರ್ಟ್ ತೀರ್ಪು ಮುಂದಿಟ್ಟುಕೊಂಡೇ ದೇವಾಲಯಗಳ ಸಂರಕ್ಷಣೆಗೆ ಸರ್ಕಾರ ಯೋಜನೆ ರೂಪಿಸಿದೆ. ದೇವಸ್ಥಾನಗಳು ಭಕ್ತರ ಭಾವನಾತ್ಮಕ ವಿಚಾರ. ದೇಗುಲಗಳ ಮೇಲಿನ ದಾಳಿ ಭಕ್ತರ ಮೇಲಿನ ದಾಳಿ ಎಂದೇ ಹೇಳಲಾಗುತ್ತದೆ. ದೇಗುಲಗಳು ಸರ್ಕಾರವನ್ನೇ ಬುಡಮೇಲು ಮಾಡಿದ ಇತಿಹಾಸ ಕೂಡ ಇರುವುದರಿಂದ ಎಚ್ಚೆತ್ತ ರಾಜ್ಯ ಸರ್ಕಾರ ಅಯೋಧ್ಯೆ ಮಾದರಿಯಲ್ಲಿ ದೇವಾಲಯ ಸಂರಕ್ಷಣೆಗೆ ನಿರ್ಧರಿಸಿದೆ.
ರಾಜ್ಯದ 38 ಸಾವಿರ ದೇವಾಲಯಗಳನ್ನು ರಾಮಜನ್ಮಭೂಮಿ ವಿಚಾರ ಮುಂದಿಟ್ಟು ರಕ್ಷಿಸಲು ಮುಂದಾಗಿದೆ. ಪಾಣಿಪತ್ರದಲ್ಲಿ ಜಾಗ ದೇವರಿಗೆ ಸೇರಿದ್ದು ಎಂದು ನೋಂದಣಿ ಮಾಡಿಸುವುದು, ದೇವರ ಹೆಸರಿನ ಜಾಗ ಎಂದು ನಮೂದಿಸುವುದರಿಂದ ದೇಗುಲ ಧ್ವಂಸ ಸಾಧ್ಯವಿಲ್ಲ. ಆಸ್ತಿ ಪರಭಾರೆ ಮಾಡಿದ ಜಾಗ ಹಿಂಪಡೆಯಲು ನಿರ್ಧಾರ. 9860 ಎಕರೆ ಭೂಮಿ ಹಿಂಪಡೆಯಲು ತೀರ್ಮಾನ. ದೇಗುಲ ಜೀರ್ಣೋದ್ಧಾರ ಟ್ರಸ್ಟಿಗಳು ಮೇಲುಸ್ತುವಾರಿಯಾಗಿ ಕೆಲಸ ಮಾಡಬೇಕು. ಜಾಗಕ್ಕೂ ಟ್ರಸ್ಟಿಗಳಿಗೂ ಸಂಬಂಧವಿಲ್ಲದಂತೆ ನೋಡಿಕೊಂಡು ದೇಗುಲ ಜಾಗ ರಕ್ಷಣೆ ಸೇರಿದಂತೆ ಹೊಸ ನಿಯಮಗಳನ್ನು ತಂದು ದೇವಾಲಯಗಳನ್ನು ಅಯೋಧ್ಯೆ ಮಾದರಿಯಲ್ಲಿ ರಕ್ಷಿಸಲು ತೀರ್ಮಾನಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ