Kannada NewsKarnataka NewsLatest

ಬೆಳಗಾವಿ ಲೋಕಸಭೆ ಸೇರಿ ಉಪಚುನಾವಣೆ ದಿನಾಂಕ ಪ್ರಕಟ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬೆಳಗಾವಿ ಲೋಕಸಭೆ ಸೇರಿದಂತೆ ರಾಜ್ಯದ 3 ಉಪಚುನಾವಣೆಗಳ ದಿನಾಂಕ ಪ್ರಕಟವಾಗಿದೆ.

ಏಪ್ರಿಲ್ 17ರಂದು ಬೆಳಗಾವಿ ಲೋಕಸಭೆ ಹಾಗೂ ಇನ್ನೆರಡು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ನಡೆಯಲಿದೆ. ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.

Home add -Advt

ಬಸವಕಲ್ಯಾಣ ಮತ್ತು ಮಸ್ಕಿ ಚುನಾವಣೆ ಸಹ ಏಪ್ರಿಲ್ 17ರಂದೇ ನಡೆಯಲಿದೆ. ಸಿಂದಗಿ ಕ್ಷೇತ್ರದ ಚುನಾವಣೆ ಘೋಷಣೆಯಾಗಿಲ್ಲ.

ತಕ್ಷಣದಿಂದಲೇ ಇಡೀ ಜಿಲ್ಲೆಯಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದೆ.

ಮಾ.23ರಂದು ಚುನಾವಣೆ ನೋಟಿಫಿಕೇಶನ್ ಹೊರಬೀಳಲಿದೆ. ಮಾರ್ಚ್ 30 ನಾಮಪತ್ರ ಸಲ್ಲಿಕೆಗೆ ಅಂತಿಮ ದಿನ. 31ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 3 ಅಂತಿಮ ದಿನ. ಏ.17, ಶನಿವಾರ ಮತದಾನ ನಡೆಯಲಿದೆ. ಮೇ 2ರಂದು ಮತ ಎಣಿಕೆ ನಡೆಯಲಿದೆ. ಮೇ. 4ರಂದು ನೀತಿ ಸಂಹಿತೆ ಮುಕ್ತಾಯವಾಗಲಿದೆ.

ಸುರೇಶ ಅಂಗಡಿ ನಿಧನದಿಂದ ಬೆಳಗಾವಿ ಲೋಕಸಭೆ ಕ್ಷೇತ್ರ ಖಾಲಿಯಾಗಿತ್ತು.

ಚುನಾವಣೆ ಅಧಿಸೂಚನೆ ಇಲ್ಲಿದೆ  – 16.03.2021 Schedule for bye-elections in PCs and ACs of various States (1)

 

ಬೆಳಗಾವಿ ಲೋಕಸಭೆ ಸೇರಿ ಉಪಚುನಾವಣೆಗಳಿಗೆ ಪ್ರತ್ಯೇಕ ನೋಟಿಫಿಕೇಶನ್

Related Articles

Back to top button