ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಫೆ.೨೭ ೨೦೨೩ ರಂದು ಬೆಳಗಾವಿ ನಗರಕ್ಕೆ ಪ್ರಧಾನ ಮಂತ್ರಿಗಳು, ಭೇಟಿ ನೀಡಲಿದ್ದು, ಈ ಕಾರ್ಯಕ್ರಮದ ಪ್ರಯುಕ್ತ ಬೆಳಗಾವಿ ವಿಭಾಗದಿಂದ ಒಟ್ಟು ೩೫೦ ವಾಹನಗಳನ್ನು ಪೂರೈಸಬೇಕಾಗಿದೆ, ಆದ್ದರಿಂದ ವಿಭಾಗದ ಬೆಳಗಾವಿ, ಬೈಲಹೊಂಗಲ, ರಾಮದುರ್ಗ ಮತ್ತು ಖಾನಾಪುರ ಬಸ್ ನಿಲ್ದಾಣಗಳಿಂದ ಕಾರ್ಯಾಚರಣೆಯಾಗುವ ಮಾರ್ಗಗಳ ಕೆಲವು ಸಾರಿಗೆಗಳನ್ನು ಫೆ.೨೭ ರಂದು ತಾತ್ಕಾಲಿಕವಾಗಿ ರದ್ದು ಪಡಿಸಲಾಗಿದೆ.
ರದ್ದು ಪಡಿಸಿದ ಮಾರ್ಗಗಳು :
ಬೆಳಗಾವಿಯಿಂದ- ಕೊಲ್ಲಾಪುರ, ಹುಬ್ಬಳ್ಳಿ, ಧಾರವಾಡ, ಸನ್ನತಿ, ವಿಜಯಪುರ, ಗುಡ್ಡಾಪುರ, ಬೀಡಿ, ತೋಲಗಿ, ನೇಸರಗಿ, (ದೇಶನೂರ) ಗೋಕಾಕ, ಹಿಡಕಲ್, ಪಾಶ್ಚಾಪೂರ, ಬೈಲಹೊಂಗಲ.
ಸಿಬಿಟಿಯಿಂದ ನಗರ ಉಪನಗರ – ಅನಗೋಳ, ವಡಗಾವ ಮಜಗಾವ, ವಂಟಮೂರಿ, ಕಣಬರ್ಗಿ, ರಣಕುಂಡೆ, ಚಂದನ ಹೊಸರ, ಸುಳೆಭಾವಿ, ರಾಣ ಚೆನ್ನಮ್ಮ ವಿಶ್ವವಿದ್ಯಾಲಯ, ಹೊನಗಾ, ಯಳ್ಳೂರು, ಉಚಗಾವ, ಕಲ್ಲೆ ಹೋಳ, ಸುಳೇಬಾವಿ.
ಬೈಲಹೊಂಗಲದಿಂದ ಬೆಳಗಾವಿ, ಧಾರವಾಡ, ಯರಗಟ್ಟಿ, ಮುನವಳ್ಳಿ, ನೇಸರಗಿ, ಬೆನಕಟ್ಟಿ, ಇಟಗಿರೋಡ, ಕಿತ್ತೂರು, ಹೊಳಿನಾಗಲಾಪೂರ, ಪಟ್ಟಿಹಾಳ, ಸವಟಗಿ, ಅಂಬಡಗಟ್ಟಿ, ಏಳಪಟ್ಟಿ, ತುರಮರಿ.
ರಾಮದುರ್ಗದಿಂದ ಬೆಳಗಾವಿ, ಮೆಳ್ಳಿಕೇರಿ, ಹಿರೇಕೊಪ್ಪ, ಹೊಸೂರು, ಕೊಣ್ಣೂರು, ಮೂಲಂಗಿ, ಯಾದವಾಡ, ಅನವಾಲ, ಲಕ್ಕನಾಯಕನಕೊಪ್ಪ, ರೆಡ್ಡರತಿಮ್ಮಾಪೂರ, ಗೊಣಗನೂರು, ಗೊಡಚಿ, ಮುನವಳ್ಳಿ, ಯರಗಟ್ಟಿ, ಹುಲಕುಂದ, ಕುಳಗೇರಿ, ಕಮಕೇರಿ, ಕೆರೂರು.
ಖಾನಾಪುರದಿಂದ- ಬೆಳಗಾವಿ, ಇಟಗಿಕ್ರಾಸ್, ಬಿದರಬಾವಿ, ಚಿಕಲಾ, ಪಾರವಾಡ, ಘೋಡಗೇರಿ, ಬೀಡಿ, ಕಿತ್ತೂರು.
ಈ ಮಾರ್ಗಗಳಲ್ಲಿ ಹೆಚ್ಚಿನ ಪ್ರಮಾಣದ ವಾಹನಗಳು ಇರುವುದರಿಂದ ಕೆಲವೊಂದು ವಾಹನಗಳನ್ನು ರದ್ದುಪಡಿಸಲಾಗಿದೆ. ಬೆಳಗಾವಿ ವಿಭಾಗದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಾರ್ಗಗಳಿಗೆ ಕನಿಷ್ಠ ಮಟ್ಟದ ಸೇವೆಯನ್ನು ಒದಗಿಸಿ ಹಾಗೂ ಯಾವುದೇ ಮಾರ್ಗಗಳು ಸೇವಾ ರಹಿತವಾಗಿರದಂತೆ ಮತ್ತು ಪ್ರಯಾಣಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಆದ್ದರಿಂದ ಸಾರ್ವಜನಿಕ ಪ್ರಯಾಣಿಕರು ಲಭ್ಯವಿರುವ ಸಾರಿಗೆ ಸೌಲಭ್ಯವನ್ನು ಪಡೆದು ಪ್ರಯಾಣಿಸಬೇಕು ಎಂದು ವಾಕರಸಾಸಂಸ್ಥೆ ಬೆಳಗಾವಿ ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆ.27ರಂದು ಹಲವೆಡೆ ವಿದ್ಯುತ್ ವ್ಯತ್ಯಯ
https://pragati.taskdun.com/power-failure-in-many-places-on-february-27/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ