ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ : ಅಜ್ಮೀರ ದರ್ಗಾಕ್ಕೆ ಹೋಗಿ ಮರಳಿ ಬಂದಿರುವ ೨೨ ಕೊರೊನಾ ಸೊಂಕಿತ ವ್ಯಕ್ತಿಗಳ ನೇರಸಂಪರ್ಕ ಹೊಂದಿರುವ ಐದು ವ್ಯಕ್ತಿಗಳ ಟೆಸ್ಟಿಂಗ್ ನೆಗಟಿವ್ ಬಂದಿರುವುದರಿಂದ ತಾಲೂಕಿನ ಜನರು ನಿಟ್ಟುಸಿರು ಬಿಟ್ಟು ಪಟಾಕ್ಷಿ ಹಾರಿಸಿ ಸಂತಸ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಸಂಕೇಶ್ವರ, ಹುಕ್ಕೇರಿ, ಹಾಗೂ ಗೋಟೂರ ಪ್ರವಾಸಿ ಮಂದಿರದಲ್ಲಿ ಅಡುಗೆ ಕೆಲಸಮಾಡುತ್ತಿರುವ ಸಿಬ್ಬಂದಿಗಳು ಅಜ್ಮೀರ ದರ್ಗಾಕ್ಕೆ ಹೋಗಿರುವ ೨೨ ವ್ಯಕ್ತಿಗಳ ನೇರ ಸಂಪರ್ಕಕ್ಕೆ ಬಂದಿದ್ದರು.
ಕೊರೊನಾ ಪಾಜಿಟಿವ್ ಬಂದಿರುವ, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳನ್ನು ಪ್ರಥಮ ಹಂತದಲ್ಲಿ ಭೇಟಿ ಆಗಿರುವ ೫ ಜನರನ್ನು ಕ್ವಾರಂಟೈನ್ದಲ್ಲಿ ಇಡಲಾಗಿತ್ತು. ಈ ಐವರ ಗಂಟಲು ದ್ರವ ಹಾಗೂ ರಕ್ತವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಐವರ ವರದಿ ಇಂದು ನೆಗಟಿವ್ ಬಂದಿರುವುದರಿಂದ ಇವರನ್ನು ಕ್ವಾರಂಟೈನ್ನಿಂದ ಬಿಡುಗಡೆ ಮಾಡಲಾಗಿದೆ ಎಂದು ತಹಶೀಲ್ದಾರ ಅಶೋಕ ಗುರಾಣಿ ತಿಳಿಸಿದ್ದಾರೆ.
ಈ ಮೂರು ಸರಕಾರಿ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಎಲ್ಲ ಸರಕಾರಿ ನೌಕರರು ಸೇರಿದಂತೆ ಸುಮಾರು ೮೦೦ ಜನರು ಊಟಮಾಡಿದ್ದರು. ಇವರೆಲ್ಲರೂ ಈ ಐವರ ವರದಿಗಾಗಿ ಚಾತಕ ಪಕ್ಷಿಯಂತೆ ಕಾಯುವುದರೊಂದಿಗೆ ದಿನಾಲು ನೂರಾರು ಜನರು ಆರೋಗ್ಯ ಇಲಾಖೆ ಅಧಿಕಾರಿಗಳ ಸಂಪರ್ಕದಲ್ಲಿದ್ದರು. ಈ ಐವರ ವರದಿ ನೆಗಟಿವ್ ಬಂದಿರುವುದರಿಂದ ಎಲ್ಲರೂ ನಿಟ್ಟುಸಿರುಬಿಟ್ಟಿದ್ದಾರೆ,
ಪ್ರವಾಸಿ ಮಂದಿರದಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳಿಗೆ ಏನಾದರೂ ವರಿದಿ ಪಾಜಿಟಿವ್ ಬಂದಿದ್ದರೆ ಈ ಮೂರೂ ಪ್ರವಾಸಿ ಮಂದಿರಗಳನ್ನು (ಹುಕ್ಕೇರಿ, ಸಂಕೇಶ್ವರ, ಪೋಲಿಸ್ ವಸತಿಗೃಹ) ಸೀಲ್ ಡೌನ್ ಮಾಡಬೇಕಾಗುತ್ತಿತ್ತು ಎಂದು ಪೋಲಿಸ್ ಅಧಿಕಾರಿಗಳು ಚಿಂತೆಯಲ್ಲಿದ್ದರು.
ಪ್ರವಾಸಿ ಮಂದಿರದಲ್ಲಿ ಅಡುಗೆ ಕಾರ್ಯನಿರ್ವವಹಿಸಿರುವ ವ್ಯಕ್ತಿಗಳು, ಕಿರಣಿ ಅಂಗಡಿ, ತರಕಾರಿ, ಹಿಟ್ಟಿನ ಗಿರಣಿ ಸೇರಿದಂತೆ ಹಲವಾರು ಕಡೆಯಲ್ಲಿ ನೂರಾರು ವ್ಯಕ್ತಿಗಳ ಜೊತೆ ಸಂಪರ್ಕಹೊಂದಿದ್ದರು. ಏನಾದರೂ ವರದಿಯಲ್ಲಿ ಪಾಸಿಟಿವ್ ಬಂದಿದ್ದರೆ ಸಂಕೇಶ್ವರ, ಹುಕ್ಕೇರಿ ಹಾಗೂ ಗೋಟೂರ ಸೇರಿದಂತೆ ಇನ್ನಿತರ ಪ್ರಮುಖ ಸ್ಥಳಗಳನ್ನು ಸೀಲ್ ಡೌನಮಾಡುವುದು ಅನಿವಾರ್ಯವಾಗುತ್ತಿತ್ತೆಂದು ಪೋಲಿಸ್ ಅಧಿಕಾರಿಗಳು ತಿಳಿಸಿದ್ದರು.
೨೨ ಜನರ ಕೊರೊನಾ ಸೊಂಕಿತ ವ್ಯಕ್ತಿಗಳ ಪ್ರಥಮ ಹಂತದಲ್ಲಿ ಸಂಪರ್ಕಹೊಂದಿರುವ ವ್ಯಕ್ತಿಗಳ ವರದಿ ನೆಗೆಟಿವ್ ಬಂದಿದೆ, ಆದರೂ ಕೂಡ ಮುನ್ನಚರಿಕೆಯಾಗಿ ಇನ್ನೂ ಐದು ದಿನಗಳ ವರಗೆ ಮನೆಯಿಂದ ಹೊರಗಡೆ ಬರಬಾರದೆಂದು ತಿಳಿಸಿಲಾಗಿದೆ.
-ಅಶೋಕ ಗುರಾಣಿ ತಹಶೀಲ್ದಾರ ಹುಕ್ಕೇರಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ