ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಶಿವಮೊಗ್ಗದ ತೀರ್ಥಹಳ್ಳಿ ಮೂಲದ ಉಗ್ರ ಅಬ್ದುಲ್ ಮತೀನ್ ಸುಳಿವು ನೀಡಿದವರಿಗೆ (ರಾಷ್ಟ್ರೀಯ ತನಿಖಾ ಸಂಸ್ಥೆ) ಎನ್‍ಐಎ 3 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದೆ.
ತೀರ್ಥಹಳ್ಳಿಯ ಸೊಪ್ಪುಗುಡ್ಡೆ ಪ್ರದೇಶದ ಫಿಶ್ ಮಾರ್ಕೆಟ್ ರಸ್ತೆ ನಿವಾಸಿಯಾಗಿರುವ ಅಬ್ದುಲ್ ಮತೀನ್ ತಮಿಳುನಾಡಿನಲ್ಲಿ ಹಿಂದೂ ಮುಖಂಡನ ಹತ್ಯೆಯಲ್ಲಿ ಭಾಗಿಯಾಗಿದ್ದ. ಅಲ್ಲದೆ ರಾಜ್ಯದಲ್ಲಿ ಐಸಿಸ್ ಪ್ರೇರಿತ ಉಗ್ರರ ಗುಂಪಿನಲ್ಲಿ ಗುರುತಿಸಿಕೊಂಡಿದ್ದನು. ಈ ಹತ್ಯೆಗೆ ಬೆಂಗಳೂರಿನ ಸದ್ದುಗುಂಟೆಪಾಳ್ಯದ ಪಿ.ಜಿಯಲ್ಲಿ ಕುಳಿತು ಸಂಚು ರೂಪಿಸಲಾಗಿತ್ತು.
ಖಚಿತ ಮಾಹಿತಿಯ ಮೇಲೆ ಪಿ.ಜಿ ಮೇಲೆ ದಾಳಿ ನೆಡೆಸಿದ್ದ ಎನ್ಐಎ ತನಿಖಾಧಿಕಾರಿಗಳ ತಂಡ. ಪಿಜಿ ಮುಖ್ಯಸ್ಥ ಮೆಹಬೂಬ್ ಪಾಶಾ ಸೇರಿದಂತೆ ದೇಶದ ವಿವಿಧೆಡೆ 12 ಜನ ಉಗ್ರರನ್ನ ಬಂಧಿಸಿತ್ತು. ಆದರೆ, ಮೆಹಬೂಬ್ ಜೊತೆ ನಿಕಟ ಸಂಪರ್ಕ ಹೊಂದಿದ್ದ ಅಬ್ದುಲ್ ಮತೀನ್ ಪರಾರಿಯಾಗಿದ್ದ.
ಈ ಹಿನ್ನಲೆಯಲ್ಲಿ ಈತನ ಪತ್ತೆಗೆ ಹುಡುಕಾಟ ನಡೆಸಲಾಗಿದ್ದು, ಸುಳಿವು ನೀಡಿದವರಿಗೆ 3 ಲಕ್ಷ ಬಹುಮಾನ ನೀಡುವುದಾಗಿ ಎನ್‍ಐಎ ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ