ಅರಣ್ಯ ಇಲಾಖೆ ಕ್ಯಾಮೆರಾದಲ್ಲಿ ಎರಡು ಬಾರಿ ಚಿತ್ರ ಸೆರೆ. ವಾಯುವಿಹಾರಿಗಳು ಮತ್ತು ಜನರಲ್ಲಿದ್ದ ಆತಂಕ ದೂರ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿನ ಗಾಲ್ಫ್ ಮೈದಾನದಲ್ಲಿ ಜನರು ನೋಡಿದ್ದು ಚಿರತೆ ಅಲ್ಲ. ಚಿರತೆ ಹೋಲುವ ದೊಡ್ಡ ಮಾದರಿಯ ಬೆಕ್ಕು ಎನ್ನುವುದನ್ನು ಅರಣ್ಯ ಇಲಾಖೆ ಖಾತರಿ ಮಾಡಿಕೊಂಡಿದ್ದು, ಜನರ ಆತಂಕ ದೂರ ಆಗಿದೆ.
ಕಳೆದ ಎರಡ್ಮೂರು ದಿನಗಳಿಂದ ಕ್ಯಾಮೆರಾ ಮತ್ತು ಬೋನು ಇಟ್ಟು ತಪಾಸಿಸಿದ ಅರಣ್ಯ ಇಲಾಖೆಗೆ ಅದು ಕಾಡುಬೆಕ್ಕು ಎನ್ನುವುದು ತಿಳಿದು ಬಂದಿದೆ.
ಡಿಸಿಎಫ್ ಹರ್ಷ ಬಾನು, ಎಸಿಎಫ್ ಎಂ. ಬಿ. ಕುಸನಾಳ ಹಾಗೂ ಬೆಳಗಾವಿ ಆರ್ ಎಫ್ ಓ ಶಿವಾನಂದ ಮಗದುಮ, ಕಾಕತಿ ಆರ್ ಎಫ್ ಓ ನಾಗರಾಜ ಭೀಮಗೋಳ ನೇತೃತ್ವದ ಅರಣ್ಯಾಧಿಕಾರಿಗಳ ತಂಡ ಸತತ ತಪಾಸಣೆ ನಡೆಸಿತ್ತು.
ನಗರದ ರಹವಾಸಿಗಳು ಮತ್ತು ವಾಯುವಿಹಾರಿಗಳು ಆತಂಕರಹಿತವಾಗಿರಬೇಕು ಎಂದು ಅರಣ್ಯಾಧಿಕಾರಿಗಳು ಮನವಿ ಮಾಡಿದ್ದಾರೆ.
ಯಾರೋ ಚಿರತೆ ಕಂಡಿದ್ದಾಗಿ ಹೇಳಿದ್ದಾರೆಂದು ಕೆಲವರು ಜನರಲ್ಲಿ ಭಯ ಹುಟ್ಟಿಸುವ ರೀತಿಯಲ್ಲಿ ಪ್ರಚಾರ ಮಾಡಿದ್ದರು. ಇಲಿ ಹೋಗಿದ್ದಕ್ಕೆ ಹುಲಿ ಹೋಯಿತು ಎಂದಂತಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ