Latest

ಶಾಸಕ ಪರಮೇಶ್ವರ್ ನಾಯ್ಕ್ ಸಹೋದರನ ಬಂಧನ

ಪ್ರಗತಿವಾಹಿನಿ ಸುದ್ದಿ; ಬಳ್ಳಾರಿ: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಹೂವಿನ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ್ ನಾಯ್ಕ್ ಸಹೋದರ ಪಿ.ಟಿ.ಶಿವಾಜಿ ನಾಯ್ಕ್ ಸೇರಿ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ನಿವೇಶನ ವಿಚಾರವಾಗಿ ಹಲ್ಲೆ ಹಾಗೂ ಗೂಂಡಾಗಿರಿ ನಡೆಸಿದ ಪ್ರಕರಣ ಸಂಬಂಧ ಪೊಲೀಸರು ಶಿವಾಜಿ ನಾಯ್ಕ್, ಪತ್ನಿ ಕುಮಾರಿ ಭಾಯಿ, ಮಗ ರಾಹುಲ್, ಜಗದೀಶ್, ಪತ್ನಿ ಶ್ರೀದೇವಿ ಹಾಗೂ ಸಹೋದರ ಶಿವಕುಮಾರ್ ನನ್ನು ಬಂಧಿಸಿದ್ದಾರೆ.

Home add -Advt

ನಿವೇಶನ ವಿಚಾರವಾಗಿ ಗೂಂಡಾಗಿರಿ ನಡೆಸಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಶರಣ ನಾಯ್ಕ್ ಕುಟುಂಬ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಶಿವಾಜಿ ನಾಯಕ್ ಬಂಧನವಾಗಿತ್ತು. ಬೇಲ್ ಪಡೆದು ನಿನ್ನೆ ಬಿಡುಗಡೆಯಾಗಿ ಬಂದಿದ್ದ ಶಿವಾಜಿ ನಾಯ್ಕ್ ನನ್ನ ವಿರುದ್ಧವೇ ದೂರು ನೀಡುತ್ತೀಯಾ ಎಂದು ಮತ್ತೆ ಹಲ್ಲೆ ನಡೆಸಿದ್ದರು. ಗಲಾಟೆ ಹಾಗೂ ಮಾರಾಮಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಹಲ್ಲೆಗೊಳಗಾದ ಕುಟುಂಬ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿತ್ತು. ಇದೀಗ ಪ್ರಕರಣ ಸಂಬಂಧ ಶಿವಾಜಿ ನಾಯ್ಕ್ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ.

ನಾಳೆಯಿಂದ ದೇವರ ದರ್ಶನ; ಆದರೆ ಷರತ್ತು ಅನ್ವಯ

Related Articles

Back to top button