ಪ್ರಗತಿವಾಹಿನಿ ಸುದ್ದಿ, ಮಂಗಳೂರು: ಒಂದೆಡೆ ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು ದೇಶದ ಆಸ್ತಿಕರ ಪಾಲಿಗೆ ಪ್ರತೀಕ್ಷೆಯ ಕ್ಷಣಗಳನ್ನು ತರುತ್ತಿದ್ದರೆ ಇತ್ತ ದಕ್ಷಿಣ ಭಾರತದಲ್ಲಿ ದೇಶದ ಎರಡನೇ ಭಾರತಮಾತಾ ಮಂದಿರದ ಲೋಕಾರ್ಪಣೆ ಕ್ಷಣ ಎದುರಾಗಿದೆ.
ಇಷ್ಟಕ್ಕೂ ಇದು ಕರ್ನಾಟಕದಲ್ಲಿ ನಿರ್ಮಾಣವಾಗಿರುವುದು ಹೆಮ್ಮೆಯ ಸಂಗತಿ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಹನುಮಗಿರಿ ಪಂಚಮುಖಿ ಆಂಜನೇಯ ಕ್ಷೇತ್ರದ ಬಳಿಯಿತುವ ಅಮರಗಿರಿಯಲ್ಲಿ ಧರ್ಮಶ್ರೀ ಪ್ರತಿಷ್ಠಾನ ಭವ್ಯವಾದ ಭಾರತ ಮಾತಾ ಮಂದಿರ ನಿರ್ಮಿಸಿದೆ. ಇದನ್ನು ಇಂದೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಾರ್ಪಣೆಗೊಳಿಸಲಿದ್ದಾರೆ.
ಈಗಾಗಲೇ ದಕ್ಷಿಣ ಭಾರತದ ತುತ್ತತುದಿ ಕನ್ಯಾಕುಮಾರಿಯಲ್ಲಿ ಭಾರತಮಾತಾ ಮಂದಿರವಿದೆ. ಇದೀಗ ನಿರ್ಮಾಣವಾಗಿರುವುದು ದೇಶದಲ್ಲೇ 2ನೆಯ ಭಾರತಮಾತಾ ಮಂದಿರ. 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ದೇಗುಲ ದೇಶ, ಭಾರತೀಯ ಉನ್ನತ ಸಂಸ್ಕೃತಿಯ ಅಭಿಮಾನದ ದೀಪ ಪ್ರತಿ ಹೃದಯಗಳಲ್ಲಿ ಪ್ರಜ್ವಲಿಸಲು ಪೂರಕವೆಂಬ ಅಭಿಪ್ರಾಯ ವ್ಯಕ್ತವಾಗಿದೆ.
ಭಾರತ ಮಾತೆಯ ಮೂರ್ತಿಯೇ ಪ್ರಧಾನವಾಗಿರುವ ದೇಗುಲದ ಆವರಣ ಆಕರ್ಷಕ ತೋಟ ಹೊಂದಿದ್ದು, ಅಲ್ಲಿ ಯೋಧರು, ರೈತರು, ಸ್ವಾತಂತ್ರ್ಯ ಸೇನಾನಿಗಳ ಪ್ರತಿಮೆಗಳನ್ನು ನಿರ್ಮಿಸಲಾಗಿದ್ದು ರಮಣೀಯ ಸ್ಥಳವಾಗಿ ರೂಪಿಸಲಾಗಿದೆ.
ಧರ್ಮಸ್ಥಳ, ಉಡುಪಿ, ಸುಬ್ರಹ್ಮಣ್ಯ, ಮುರುಡೇಶ್ವರ, ಇಡಗುಂಜಿ, ಗೋಕರ್ಣ ಇತ್ಯಾದಿ ಪುಣ್ಯಸ್ಥಳಗಳ ಸರಣಿ ಪಟ್ಟಿಯನ್ನೇ ಹೊಂದಿದ ಕರಾವಳಿಯ ಶ್ರೀ ಭಾರತಮಾತಾ ದೇಗುಲ ಮತ್ತೊಂದು ಶ್ರೀಕ್ಷೇತ್ರವಾಗಿ ಸೇರ್ಪಡೆಯಾಗಿರುವುದು ವಿಶೇಷ.
ಮೊದಲು ಹನುಮಗಿರಿ ಆಂಜನೇಯನ ದರ್ಶನ ಪಡೆಯಲಿರುವ ಅಮಿತ್ ಶಾ ನಂತರ ಭಾರತಮಾತಾ ಮಂದಿರ ಲೋಕಾರ್ಪಣೆಗೊಳಿಸುತ್ತಿರುವುದಾಗಿ ಭಾರತಮಾತಾ ಮಂದಿರದ ಧರ್ಮದರ್ಶಿ ಅಚ್ಯುತ್ ಮೂಡೆತ್ತಾಯ ತಿಳಿಸಿದ್ದಾರೆ.
ಕಚೇರಿ ಕೆಲಸ 5 ದಿನಕ್ಕೆ ಸೀಮಿತಗೊಳಿಸಿ; ಒಂದು ತಾಸು ಕೆಲಸ ಹೆಚ್ಚಿಸಿ
https://pragati.taskdun.com/limit-office-work-to-5-days-increase-work-by-one-hour/
ಭಾನುವಾರ ಬೆಳಗಾವಿಯ ವಿವಿಧ ನಗರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
https://pragati.taskdun.com/power-cut-in-various-urban-areas-of-belgaum-on-sunday/
*ಗೋಕಾಕ್: ಮನೆ ಕಳ್ಳತನ ಕೇಸ್; ಆರೋಪಿ ಬಂಧನ*
https://pragati.taskdun.com/gokaktheft-caseaccuesd-arrested/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ