ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನ ನಂದಗಡದಲ್ಲಿ ಕಾಡುಕೋಣ ಬೇಟೆಯಾಡಿ ಮಾಂಸ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ತಂಡ ಬಂಧಿಸಿದೆ.
ಡೆವಿಡ್ ಫಿಗೇರ್ ಮತ್ತು ಹಸನ್ ಬೇಪಾರಿ ಬಂಧಿತರು. ಇವರಿಂದ 11 ಕೆಜಿ ಕಾಡುಕೋಣದ ಮಾಂಸ, ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ, ೆರಡು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ ಅವರ ನಿರ್ದೇಶನ, ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಬಾನು ಜಿ.ಪಿ. ಮಾರ್ಗದರ್ಶನ, ಖಾನಾಪುರ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಚವ್ಹಾಣ ನೇತೃತ್ವದಲ್ಲಿ ಖಾನಾಪುರ ವಲಯ ಅರಣ್ಯಾಧಿಕಾರಿ ಕವಿತಾ ಇರನಟ್ಟಿ, ನಂದಗಡ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಮಾಳಪ್ಪ ಲಚ್ಯಾಣ, ರಾಘವೇಂದ್ರ ಕಂಟಿಕಾರ, ಗಸ್ತು ಅರಣ್ಯ ಪಾಲಕ ಮಲ್ಲೇಶಪ್ಪಾ ಬಿರಾದಾರ, ಅರಣ್ಯ ವೀಕ್ಷಕ ಸಮೀರ್ ಶೇಖ್ ಕಾರ್ಯಾಚರಣೆ ನಡೆಸಿದ ತಂಡದಲ್ಲಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ