Kannada NewsLatest

“ಹುಡುಗರು ಸೊಂಟಕ್ಕೆ ಕೈ ಇಟ್ಟರೆ ದೂರು ಕೊಡಬೇಡಿ, ಎಂಜಾಯ್ ಮಾಡಿ..” ಎಂದು ಸಲಹೆ ನೀಡಿದ ನಟಿ

ಪ್ರಗತಿವಾಹಿನಿ ಸುದ್ದಿ, ಚೆನ್ನೈ: ತುಂಬಾ ಸೆಕ್ಸಿಯಾಗಿ ಕಂಡಾಗ ಹುಡುಗರು ಸೊಂಟದ ಮೇಲೆ ಕೈ ಇಟ್ಟರೆ ದೂರು ನೀಡಬಾರದಂತೆ. ಬದಲಾಗಿ ಎಂಜಾಯ್ ಮಾಡಬೇಕೆಂತೆ.

ಇದು ಸದಾ ಏನಿಲ್ಲ ಒಂದು ವಿವಾದದಿಂದ ಪ್ರಚಾರದಲ್ಲಿರುವ ನಟಿ ರೇಖಾ ನಾಯರ್ ಉಚಿತ ಸಲಹೆ. ಸಂದರ್ಶನವೊಂದರಲ್ಲಿ ಅವರು ನೀಡಿದ ಈ ಸಲಹೆ ಈಗ ವ್ಯಾಪಕ ಟೀಕೆಗೆ ಒಳಗಾಗುತ್ತಿದೆ. ಒಂದಿಷ್ಟು ಜನ ಅದರಲ್ಲಿ ತಪ್ಪೇನಿದೆ? ಎಂದು ಹೇಳುವ ಮೂಲಕ ಸಮರ್ಥನೆಯನ್ನೂ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಆ್ಯಂಕರ್ ಒಬ್ಬರು ನಟಿ ರೇಖಾ ಅವರಿಗೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ತುಂಬ ಸೆಕ್ಸಿ ಉಡುಗೆಗಳನ್ನು ಧರಿಸುವ ಬಗ್ಗೆ ಪ್ರತಿಕ್ರಿಯೆ ಕೇಳಿದ್ದಾರೆ. ಇದಕ್ಕೆ ರೇಖಾ ಹೇಳಿದ್ದೇ ಬೇರೆ. “ತುಂಬಾ ಹಾಟ್ ಆಗಿರುವ ಉಡುಗೆ ಧರಿಸಿದ ಸಂದರ್ಭದಲ್ಲಿ ನಿಮ್ಮ ಸೊಂಟದ ಮೇಲೆ ಯಾರಾದರೂ ಹುಡುಗರು ಕೈ ಇಟ್ಟರೆ ದೂರು ಕೊಡಬೇಡಿ, ಅದನ್ನು ಎಂಜಾಯ್ ಮಾಡಿ” ಎಂದಿದ್ದಾರೆ.

ಕಾಲಿವುಡ್ ನಟ ಪಾರ್ಥಿಬನ್ ನಿರ್ದೇಶನದ ಇರವಿನ್ ನಿಝಾಲ್ ಸಿನೆಮಾದಲ್ಲಿ ಬೆತ್ತಲೆಯಾಗಿ ನಟಿಸಿದ ರೇಖಾ ಭಾರೀ ವಿವಾದಕ್ಕೆ ಗುರಿಯಾಗಿದ್ದರು. ಇದೀಗ ‘ಕಟಿಗೆ ಕೈ, ಕಂಪ್ಲೆಂಟ್ ಬದಲು ಎಂಜಾಯ್’ ವಿಷಯದ ಮೂಲಕ ರೇಖಾ ಮತ್ತೆ ಮಡಿವಂತರನ್ನು ರೇಗಿಸಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button