ಶಿಮ್ಲಾ – ಮದುಮಗನನ್ನು ಅಲಂಕೃತ ಐಷಾರಾಮಿ ಕಾರ್‌ನಲ್ಲಿ ಮದುವೆಗೆ ಕರೆತರುವ ದೃಷ್ಯ ಸಾಮಾನ್ಯ. ಗ್ರಾಮೀಣ ಭಾಗದ ಕೆಲವೆಡೆ ಚಕ್ಕಡಿ ಗಾಡಿ ಬಳಸುವುದೂ ಇದೆ. ಆದರೆ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಮದುಮಗನೊಬ್ಬ ಜೆಸಿಬಿಯಲ್ಲಿ ಬಂದಿದ್ದಾನೆ !
ಹೌದು, ಶಿಮ್ಲಾದಲ್ಲಿ ತೀವ್ರವಾಗಿ ಹಿಮಪಾತವಾಗುತ್ತಿದೆ. ಬೇರಾವುದೇ ವಾಹನಗಳು ಸಂಚರಿಸಲು ಸಾಧ್ಯವಿಲ್ಲದಂತಾಗಿದೆ. ಆದರೆ ಮದುವೆಯ ಮುಹೂರ್ತವನ್ನು ತಪ್ಪಿಸುವಂತಿಲ್ಲ. ಹಾಗಾಗಿ ಹಿಮವನ್ನು ಸರಿಸುತ್ತ ಮುನ್ನಡೆಯಲು ಜೆಸಿಬಿಯೇ ಸೂಕ್ತ ಎಂದು ತೀರ್ಮಾನಿಸಿ ಜೆಸಿಬಿಯಲ್ಲೇ ಮದುವೆಗೆ ತೆರಳಲಾಗಿದೆ.
ಮದುಮಗ ಜೆಸಿಬಿಯಲ್ಲಿ ತೆರಳಿದ ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗುತ್ತಿದೆ.
Because of heavy Snowfall going on in Himachal,a barat was ferried in Two JCB Machines in a Snow Bound are of Shimla district in Himachal ..Watch this video of Barat in JCBs ..Himachali Rocks pic.twitter.com/OU6hDDVQea
— Anilkimta (@Anilkimta2) January 24, 2022
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ